ಹಲಸಿನ ಹಣ್ಣಿನ ಐಸ್ ಕ್ರೀಂ ಮನೆಯಲ್ಲೇ ಮಾಡಿ

ಈಗ ಹಲಸಿನ ಹಣ್ಣಿನ ಸೀಸನ್. ಜೊತೆಗೆ ಬೇಸಿಗೆಯ ಬೇಗೆಗೆ ತಂಪಾದ ಐಸ್ ಕ್ರೀಂ ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಹಲಸಿನ ಹಣ್ಣು ಬಳಸಿ ಐಸ್ ಕ್ರೀಂ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಹಲಸಿನ ಹಣ್ಣಿನ ಬೀಜ, ಕಸ ತೆಗೆದು ಕ್ಲೀನ್ ಮಾಡಿಕೊಳ್ಳಿ

ಈಗ ಇದನ್ನು ಸೀಳಿಕೊಂಡು ಮಿಕ್ಸಿಗೆ ಹಾಕಿಕೊಳ್ಳಿ

ಇದಕ್ಕೆ ಶುಗರ್, ಮಿಲ್ಕ್ ಪೌಡರ್ , ಹಾಲು ಸೇರಿಸಿಕೊಳ್ಳಿ

ಇದರ ಜೊತೆಗೆ ಸ್ವಲ್ಪ ಫ್ರೆಶ್ ಕ್ರೀಂ ಕೂಡಾ ಸೇರಿಸಿಕೊಳ್ಳಿ

ಈಗ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ

ಈಗ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಫ್ರೀಝರ್ ನಲ್ಲಿಡಿ

ಈಗ ಇದನ್ನು 8 ಗಂಟೆ ಫ್ರೀಝರ್ ನಲ್ಲಿಟ್ಟರೆ ಐಸ್ ಕ್ರೀಂ ರೆಡಿ

ಮೊಟ್ಟೆ ಹಾಕದೇ ಚಾಕಲೇಟ್ ಕೇಕ್ ಮಾಡುವ ವಿಧಾನ

Follow Us on :-