ಚಪಾತಿ, ಪೂರಿಗೆ ಅವರೆಕಾಳು ಸಾಗು ಹೀಗೆ ಮಾಡಿ

ಅವರೆಕಾಳು ಸೀಸನ್ ನಲ್ಲಿ ಅದರಿಂದ ಥರಹೇವಾರಿ ಅಡುಗೆಗಳನ್ನು ಮಾಡುತ್ತೇವೆ. ಅವರೆಕಾಳು ಬಳಸಿ ಚಪಾತಿ, ಪೂರಿ, ರೊಟ್ಟಿಗೆ ಸೇರಿಸಬಹುದಾದ ರುಚಿಕರ ಸಾಗು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಅವರೆಕಾಳನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರ್ ಗೆ ಹಾಕಿ

ಇದಕ್ಕೆ ಸ್ವಲ್ಪ ಅರಿಶಿನ, ಸಾಕಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿ

ಹಸಿಮೆಣಸು, ಹುರಿಗಡಲೆ, ಕಾಯಿತುರಿ, ಶುಂಠಿ, ಜೀರಿಗೆ, ಧನಿಯಾ ಮಿಕ್ಸಿಗೆ ಹಾಕಿ

ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಬೇಯಿಸಿದ ಅವರೆಕಾಳಿಗೆ ರುಬ್ಬಿದ ಮಸಾಲೆಯನ್ನು ಸೇರಿಸಿ

ಇದಕ್ಕೆ ಬೇಕಾಗುವಷ್ಟು ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿ ಬರಿಸಿ

ಬಳಿಕ ಸಾಸಿವೆ, ಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಅವರೆ ಸಾಗು ರೆಡಿ

ಫ್ರಿಡ್ಜ್ ಇಲ್ಲದೇ ಟೊಮೆಟೊ ಹಾಳಾಗದಂತೆ ಇಡಲು ಟಿಪ್ಸ್

Follow Us on :-