ಆಂಧ್ರ ಸ್ಟೈಲ್ ನಲ್ಲಿ ಸುಲಭವಾಗಿ ರಸಂ ಮಾಡುವ ವಿಧಾನ

ಆಂಧ್ರ ಸ್ಟೈಲ್ ಊಟ ಮಾಡುವಾಗ ಕುಡಿಯಲು ಒಂದು ಗರಂ ರಸಂ ನೀಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಿದ್ದರೆ ಆಂಧ್ರ ಸ್ಟೈಲ್ ನ ರಸಂ ಮಾಡುವುದು ಹೇಗೆ ನೋಡೋಣ.

Photo Credit: Instagram

ಮೊದಲು ಎರಡು ಸ್ಪೂನ್ ಕಾಳು ಮೆಣಸು, ಅರ್ಧ ಸ್ಪೂನ್ ಜೀರಿಗೆ ಮತ್ತು ನಾಲ್ಕೈದು ಬೆಳ್ಳುಳ್ಳಿ ಜಜ್ಜಿಕೊಳ್ಳಿ

ಇದಕ್ಕೆ ನೀರು ಹಾಕದೇ ಪೇಸ್ಟ್ ನ ಹದಕ್ಕೆ ಜಜ್ಜಿ ರೆಡಿ ಮಾಡಿಟ್ಟುಕೊಳ್ಳಿ

ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಇಂಗು, ಮೆಣಸು ಹಾಕಿ ಸಿಡಿಯಲು ಬಿಡಿ

ಈಗ ಇದಕ್ಕೆ ಸ್ವಲ್ಪ ಇಂಗು ಮತ್ತು ಅರಿಶಿನ ಪುಡಿ ಹಾಕಿ ಒಂದು ಸುತ್ತು ಫ್ರೈ ಮಾಡಿ

ಇದಕ್ಕೆ ಸ್ವಲ್ಪ ಹೆಚ್ಚಿದ ಟೊಮೆಟೊ ಹಾಗೂ ಉಪ್ಪು ಸೇರಿಸಿ ಫ್ರೈ ಮಾಡಿಕೊಳ್ಳಿ

ಇದು ಬೆಂದ ಬಳಿಕ ರೆಡಿ ಮಾಡಿಟ್ಟುಕೊಂಡಿರುವ ಮಸಾಲಗಳ ಪೇಸ್ಟ್ ನ್ನು ಸೇರಿಸಿ

ಬಳಿಕ ಬೇಕಾದಷ್ಟು ನೀರು ಸೇರಿಸಿಕೊಂಡು ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ರಸಂ ರೆಡಿ

ತಮಿಳು ಸ್ಟೈಲ್ ನಲ್ಲಿ ಆಲೂಗಡ್ಡೆ ಫ್ರೈ ಮಾಡಿ

Follow Us on :-