ತೆಂಗಿನಕಾಯಿಯನ್ನು ಹಾಳಾಗದಂತೆ ಇಡುವುದು ಹೇಗೆ

ತೆಂಗಿನ ಕಾಯಿ ಒಮ್ಮೆ ಒಡೆದರೆ ಇಡೀ ಉಪಯೋಗಕ್ಕೆ ಬರುವುದಿಲ್ಲ. ಅರ್ಧ ಸರಿಯಾಗಿ ಎತ್ತಿಡದೇ ಇದ್ದರೆ ಹಾಳಾಗಿಬಿಡುತ್ತದೆ. ಹೀಗಾಗಿ ತೆಂಗಿನ ಕಾಯಿಯನ್ನು ಹಾಳಾಗದಂತೆ ಸಂರಕ್ಷಿಸಿ ಇಡುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: WD

ತೆಂಗಿನಕಾಯಿ ಖರೀದಿಸುವಾಗ ನೀರು ಇದೆಯೇ ಎಂದು ನೋಡಿಕೊಂಡೇ ಖರೀದಿಸಿ

ತೆಂಗಿನಕಾಯಿ ತಕ್ಷಣವೇ ಉಪಯೋಗಿಸದಿದ್ದರೆ ಅದರ ಜುಟ್ಟು ತೆಗೆಯದೇ ಎತ್ತಿಡಿ

ಭಾಗ ಮಾಡಿದ ತೆಂಗಿನಕಾಯಿಯನ್ನು ಗಾಳಿಯಾಡದ ಬಾಕ್ಸ್ ನಲ್ಲಿಟ್ಟು ಫ್ರಿಡ್ಜ್ ನಲ್ಲಿಡಿ

ಒಡೆದ ತೆಂಗಿನಕಾಯಿ ನೀರಿನಂಶ ಆರಿದ ಬಳಿಕ ಫ್ರಿಡ್ಜ್ ನಲ್ಲಿಟ್ಟರೆ ಅಷ್ಟು ಬೇಗ ಹಾಳಾಗದು

ಫ್ರಿಡ್ಜ್ ಇಲ್ಲದೇ ಇದ್ದರೆ ಒಡೆದ ತೆಂಗಿನಕಾಯಿಯನ್ನು ನೀರಿನಲ್ಲಿ ಮುಳುಗಿಸಿಟ್ಟರೆ ಎರಡು ದಿನ ಹಾಳಾಗದು

ತೆಂಗಿನಕಾಯಿ ತುರಿದಿದ್ದರೆ ಅದನ್ನು ಗಾಳಿಯಾಡದ ಬಾಕ್ಸ್ ನಲ್ಲಿಟ್ಟು ಫ್ರೀಝರ್ ನಲ್ಲಿಟ್ಟರೆ ಹಾಳಾಗದು

ಒಡೆದ ತೆಂಗಿನಕಾಯಿಯನ್ನು ತಕ್ಷಣಕ್ಕೆ ಉಪಯೋಗಿಸದಿದ್ದರೆ ಬಿಸಿಲಿಗೆ ಒಣಗಿಸಿಟ್ಟುಕೊಳ್ಳಬಹುದು.

ಇಡ್ಲಿ ಕಲ್ಲಿನಂತಾಗುತ್ತದೆಯೇ ಕಾರಣವೇನು

Follow Us on :-