ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುತ್ತಿದ್ದರೆ ಹೀಗೆ ಮಾಡಿ
ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಹಾಕಿಟ್ಟರೆ ಅದು ಗಟ್ಟಿಯಾಗಿ ಉಪಯೋಗಿಸಲು ಕಷ್ಟವಾಗುತ್ತದೆ. ಕೊಬ್ಬರಿ ಎಣ್ಣೆ ವಿಪರೀತ ಚಳಿಯಿಂದ ಗಟ್ಟಿಯಾಗದಂತೆ ಯಾವ ರೀತಿ ಇಟ್ಟುಕೊಳ್ಳಬೇಕು ಇಲ್ಲಿದೆ ಟಿಪ್ಸ್.
Photo Credit: Instagram
ಕೊಬ್ಬರಿ ಎಣ್ಣೆಯಲ್ಲಿ ಕೊಬ್ಬಿನಂಶವೂ ಇರುವುದರಿಂದ ಇದು ಚಳಿಯ ವಾತಾವರಣಕ್ಕೆ ಗಟ್ಟಿಯಾಗುತ್ತದೆ
ಕೊಬ್ಬರಿ ಎಣ್ಣೆ ತುಪ್ಪದಂತೆ ಗಟ್ಟಿಯಾಗಿದ್ದರೆ ಅದನ್ನು ಬಿಸಿ ಮಾಡಿ ಕರಗಿಸಿ ಬಳಸಬಹುದು
ಆದಷ್ಟು ಕೊಬ್ಬರಿ ಎಣ್ಣೆಯ ಬಾಟಲಿಯನ್ನು ಬಿಸಿ ಇರುವ ಜಾಗದಲ್ಲಿ ಇಟ್ಟುಕೊಳ್ಳಿ
ಎಣ್ಣೆಯ ಬಾಟಲಿಯ ಹೊರಗಿನಿಂದ ಮತ್ತೊಂದು ಬಾಟಲಿ ಅಥವಾ ಕವರ್ ಹಾಕಿ ಇಟ್ಟುಕೊಳ್ಳಬಹುದು
ಕೊಬ್ಬರಿ ಎಣ್ಣೆಗೆ ಎರಡು ಹನಿ ಅಡುಗೆ ಎಣ್ಣೆ ಹಾಕಿಟ್ಟರೆ ಗಟ್ಟಿಯಾಗದು
ಸ್ವಲ್ಪ ಆಲಿವ್ ಆಯಿಲ್ ಮಿಕ್ಸ್ ಮಾಡಿ ಅಗಲ ಬಾಟಲಿಯಲ್ಲಿ ಕೊಬ್ಬರಿ ಎಣ್ಣೆ ಹಾಕಿ
ಕೊಬ್ಬರಿ ಎಣ್ಣೆಯ ಬಾಟಲಿಯನ್ನು ಪೇಪರ್ ನಿಂದ ದಪ್ಪ ಕವರ್ ಮಾಡಿ ಸುತ್ತಿಟ್ಟುಕೊಂಡರೆ ಗಟ್ಟಿಯಾಗದು