ಕೆಲವರು ತಪ್ಪದೇ ಊಟ ಆದ ಮೇಲೆ ಹಾಲನ್ನು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಬೆಳಗ್ಗೆಯೂ ಹಾಲನ್ನು ಕುಡಿಯುತ್ತಾರೆ, ರಾತ್ರಿಯೂ ಊಟವಾದ ಮೇಲೆ ಹಾಲನ್ನು ಕುಡಿಯುತ್ತಾರೆ. ಬಿಳಿ ಹಾಲು ಕುಡಿಯುವದಕ್ಕಿಂತ ಅದಕ್ಕೆ ಸ್ವಲ್ಪ ಅರಿಶಿನಮಿಶ್ರಣ ಮಾಡಿ ಕುಡಿಯಿರಿ. ಅರಿಶಿನದಲ್ಲಿ ’ ಕಕ್ರ್ಯುಮಿನ್ ’ ಎಂಬ ಅಂಶವಿದ್ದು, ಇದು ದೇಹಕ್ಕೆ ಆಂಟಿ - ಇಂಪ್ಲಾಮೇಟರಿ, ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒದಗಿಸಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ.
photo credit social media
ಅರಿಶಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕೆ ಅಡುಗೆ ಮಾಡಲು ಸಹ ಅರಿಶಿಣವನ್ನು ಬಳಸುತ್ತಾರೆ. ಅರಿಶಿನವು ದೇಹಕ್ಕೆ ಆಂಟಿ -ಇಂಪ್ಲಾಮೇಟರಿ, ಆಂಟಿ-ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒದಗಿಸಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಅರಿಶಿಣವನ್ನು ಬೇರಾವುದೇ ಸಮಯದಲ್ಲಿ ಕುಡಿಯಬಾರದು. ಇನ್ನಾವುದೋ ಆಹಾರದಲ್ಲಿ ಮಿಶ್ರಣ ಮಾಡಿ ಸೇವಿಸುವುದಕ್ಕಿಂತ, ರಾತ್ರಿ ಮಲಗುವುದಕ್ಕೆ ಮುಂಚೆ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಮಿಶ್ರಣ ಮಾಡಿ ಕುಡಿಯುವುದು ಸಾಕಷ್ಟು ಒಳ್ಳೆಯದಂತೆ.
ಅರಿಶಿನದ ಹಾಲು ಕುಡಿದ್ರೆ ದೇಹಕ್ಕೆ ಒಳ್ಳೆಯದು. ದೇಹದ ಸದೃಢತೆಗಾಗಿ ಮಾಡುವ ವ್ಯಾಯಾಮದಲ್ಲಿ ನಮ್ಮ ಮಾಂಸ ಖಂಡಗಳು ಸಾಕಷ್ಟು ದಣಿದಿರುತ್ತವೆ. ಅದಕ್ಕೆ ಅರಿಶಿನದ ಹಾಲು ಕುಡಿದ್ರೆ ಮಾಂಸ ಖಂಡಗಳಿಗೆ ಉತ್ತಮ.
ಹಾಲಿಗೆ ಸರಿಯಾದ ಪ್ರಮಾಣದಲ್ಲಿ ಅರಿಶಿನವನ್ನು ಮಿಕ್ಸ್ ಮಾಡಬೇಕು.ಅರಿಶಿನವನ್ನು ಹೆಚ್ಚು ಅಥವಾ ಕಡಿಮೆ ಸೇವನೆ ಮಾಡಿದರೆ ಅದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಹೇಳಲಾಗುತ್ತೆ. ಮುಖ್ಯವಾಗಿ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಬಿಟ್ಟೂ ಬಿಡದಂತೆ ಕಾಡುತ್ತವೆಯಂತೆ. ಸರಿಯಾದ ಪ್ರಮಾಣದಲ್ಲಿ ಹಾಲಿಗೆ ಅರಿಶಿನ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು.
ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಶೀತ, ಕೆಮ್ಮು, ಕಫ ಮತ್ತು ಜ್ವರ ದೂರಾಗುತ್ತದೆ. ರಾತ್ರಿಯ ಸಮಯದಲ್ಲಿ ಅರಿಶಿನ ಮಿಶ್ರಿತ ಹಾಲು ಸೇವನೆಯಿಂದ ದೇಹದಲ್ಲಿ ಹಾರ್ಮೋನಿನ ಸಮತೋಲನ ಉಂಟಾಗುತ್ತದೆ.
ಮಧುಮೇಹ, ಹೃದಯದ ತೊಂದರೆ ಅಥವಾ ಕೀಲು ನೋವು, ಮೂಳೆಗಳ ನೋವು, ಮಾಂಸ ಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳು ಅರಿಶಿನ ಮಿಶ್ರಿತ ಹಾಲಿನಿಂದ ಪರಿಹಾರವಾಗುತ್ತವೆ.
ಹಾಲನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ಕುಡಿಯುವುದರಿಂದ ಅದು ನಮ್ಮ ದೇಹದಲ್ಲಿ ಇತರ ಆಹಾರಗಳ ಜೊತೆ ಅಷ್ಟು ಸರಾಗವಾಗಿ ಜೀರ್ಣವಾಗುವುದಿಲ್ಲ. ಆಹಾರ ತಜ್ಞರ ಪ್ರಕಾರ ರಾತ್ರಿಯ ಹೊತ್ತು ಮಲಗುವ ಮುಂಚೆ ಮಕ್ಕಳಾಗಲೀ ಅಥವಾ ದೊಡ್ಡವರಾಗಲಿ, ಉಗುರು ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.