ದಾಸವಾದಳ ಇಡ್ಲಿ ಮಾಡುವ ವಿಧಾನ

ಸುಂದರವಾಗಿ ಹೂ ಬಿಡುವ ದಾಸವಾಳ ನೋಡಲು, ಪೂಜೆಗೆ ಮಾತ್ರ ಯೋಗ್ಯವಲ್ಲ. ಇದರಲ್ಲಿ ಅನೇಕ ಔಷಧೀಯ ಗುಣಗಳಿದ್ದು, ದಾಸವಾಳದ ಇಡ್ಲಿ ಮಾಡಿ ಸೇವನೆ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Social Media

ಇಡ್ಲಿ ರವೆ, ಉದ್ದಿನ ಬೇಳೆ, ಎರಡು ಹಿಡಿಯಷ್ಟು ದಾಸವಾಳದ ಹೂವಿನ ಎಸಳುಗಳು ಬೇಕಾಗುತ್ತವೆ

ಇಡ್ಲಿ ರವೆ ಬದಲು ಅಕ್ಕಿ ತರಿಯನ್ನೂ ಬಳಸಿಕೊಳ್ಳಬಹುದು, ಇದನ್ನು ಎರಡು ಗಂಟೆ ಕಾಲ ನೆನೆ ಹಾಕಬೇಕು.

ಇಡ್ಲಿ ತರಿ ಬಳಸಿ ಮಾಡುವುದಿದ್ದರೆ ಉದ್ದಿನ ಬೇಳೆಯನ್ನು ಮಾತ್ರ ಕೆಲವು ಸಮಯ ನೆನೆ ಹಾಕಿಡಿ.

ಬಳಿಕ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಇಡ್ಲಿ ತರಿ ಮಿಕ್ಸ್ ಮಾಡಿ ಹಿಟ್ಟು ತಯಾರಿಸಿಕೊಳ್ಳಿ

ಉದ್ದಿನ ಬೇಳೆ ರುಬ್ಬುವಾಗ ದಾಸವಾಳದ ಎಸಳು ಸೇರಿಸಬಹುದು, ಇಲ್ಲವೇ ಚಿಕ್ಕದಾಗಿ ಹೆಚ್ಚಿಕೊಂಡು ಹಿಟ್ಟಿಗೆ ಹಾಕಿ

ಮಾಮೂಲಿ ಇಡ್ಲಿ ಹಿಟ್ಟಿನಂತೆ ರಾತ್ರಿಯಿಡೀ ಹುಳಿ ಬರಿಸಲು ಇಟ್ಟುಕೊಳ್ಳಿ

ಮರುದಿನ ಇಡ್ಲಿ ತಟ್ಟೆಯಲ್ಲಿ ಅಥವಾ ನಿಮಗೆ ಹೊಂದಾಣಿಕೆಯಾಗುವ ಪಾತ್ರೆಯಲ್ಲಿ ಇಡ್ಲಿ ಬೇಯಿಸಿ

ಸುಲಭವಾಗಿ ಕರಿಬೇವಿನ ಎಣ್ಣೆ ಮಾಡುವುದು ಹೇಗೆ

Follow Us on :-