ಅಲವೇರಾ ಜೆಲ್‌ನಿಂದ ಕಣ್ಣಿನ ಕೆಳಭಾಗದ ಕಪ್ಪನ್ನು ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ನಿಮ್ಮ ಕಣ್ಣುಗಳ ಕೆಳಗೆ ಚರ್ಮವು ಸಾಮಾನ್ಯಕ್ಕಿಂತ ಗಾಢವಾಗಿ ಕಾಣಿಸಿಕೊಂಡಾಗ ನೀವು ಉತ್ತಮವಾಗಿ ಕಾಣಲಾಗುವುದಿಲ್ಲ. ಇದು ಕೆಲವೊಮ್ಮೆ ಸಾಮಾನ್ಯವಾದ ಸಮಸ್ಯೆಯಾಗಿರುತ್ತದೆ. ಅತಿಯಾದ ಒತ್ತಡ, ನಿದ್ರೆಯ ಕೊರತೆ, ಕೆಫಿನ್ ಅತಿಯಾಗಿ ಸೇವಿಸುವುದು ಮುಂತಾದ ಹಲವಾರು ಅಂಶಗಳಿಂದ ಇದು ಉಂಟಾಗುತ್ತದೆ.ಈ ಕಣ್ಣಿನ ಸುತ್ತ ಉಂಟಾದ ಕಪ್ಪು ವಲಯವನ್ನು ನಿವಾರಿಸಲು ನಿಮ್ಮ ಕಣ್ಣುಗಳ ಕೆಳಗೆ ಅಲೊವೆರ ಜಲ್ ಅನ್ನು ಬಳಸುವುದು ಸುರಕ್ಷಿತವಾಗಿದೆ.ಇದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ ಮತ್ತು ರಾತ್ರಿಯಿಡೀ ಅದನ್ನು ಹಾಗೆಯೇ ಬಿಟ್ಟು ಮಾರನೆಯ ದಿನ ತಣ್ಣೀರಿನಿಂದ ತೊಳೆಯಿರಿ.

photo credit social media

ಅಲೋವೆರಾ ಜೆಲ್ ಇತ್ತೀಚಿನ ದಿನಗಳಲ್ಲಿ ಇದು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿವಿಧರೀತಿಯ ಸೋಪ್, ಜೆಲ್, ಶಾಂಪೂ , ಕ್ರೀಮ್ ಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಚರ್ಮದ ರಕ್ಷಣೆಯಲ್ಲಿ ಮೊದಲ ಸ್ಥಾನವನ್ನು ಅಲೋವೆರಾ ಜೆಲ್ ಪಡೆದುಕೊಂಡಿದೆ. ಸಾಕಷ್ಟು ರೀತಿಯಲ್ಲಿ ಇದರ ಉಪಯೋಗವನ್ನು ಮಾಡಿಕೊಳ್ಳಲಾಗುತ್ತದೆ. ಇದು ತಂಪಾಗಿಸುವ ಗುಣಲಕ್ಷಣ ಹೊಂದಿರುವುದರಿಂದ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಮೊಡವೆಗಳನ್ನು ಸರಿಪಡಿಸಲು, ಹಾನಿಗೊಳಗಾದ ಚರ್ಮವನ್ನು ಸರಿಪಡಿಸಲು ಸಹಾಯಮಾಡುವ ಪರಿಣಾಮಕಾರಿ ಅಂಶವನ್ನು ಹೊಂದಿದೆ. ಇದರಲ್ಲಿರುವ ಉತ್ತಮ ಅಂಶಗಳು ನಿಮ್ಮ ಚರ್ಮಕ್ಕೆ ಉತ್ತಮವಾದ ಪೋಷಕಾಂಶವನ್ನು ನೀಡುತ್ತದೆ. ಹಲವಾರು ರೀತಿಯ ಪರಿಸ್ಥಿತಿಗಳಲ್ಲಿ ಮನೆಮದ್ದಾಗಿ ಇದನ್ನು ಬಳಸಲಾಗುತ್ತದೆ. ಅಲೋವೆರಾ ಜೆಲ್ ಹೊಂದಿರುವ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಅಲೋವೆರಾ ಜೆಲ್ ಅಲೋಯಿನ್ ಹೊಂದಿರುತ್ತದೆ. ಇದು ನೈಸರ್ಗಿಕ ಡಿ- ಪಿಗ್ಮೆಂಟಿಂಗ್ ಸಂಯುಕ್ತ ವಾಗಿದ್ದು, ಇದು ಚರ್ಮವನ್ನು ಹಗುರಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಸಮಸ್ಯೆಯನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ನಮ್ಮ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಅಲೋವೆರ ಜೆಲ್ ಉತ್ತಮ ಪರಿಹಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲೋವೆರಾ ನಮ್ಮ ಚರ್ಮದಲ್ಲಿ ಕಾಲಜನ್ ಕೋಶಗಳನ್ನು ಹೆಚ್ಚಿಸುತ್ತದೆ. ಇದು ವಿಟಮಿನ್ ಇ ಮತ್ತು ಸಿ ಯೂ ಸಹ ಸಮೃದ್ಧವಾಗಿದೆ.

ಅಲೋವೆರಾ ಜೆಲ್ ನಿಮ್ಮ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅಲೋವೆರಾ ಜೆಲ್ ನ ಎರಡು ಪ್ರಮಾಣದಲ್ಲಿ ತೆಗೆದುಕೊಳ್ಳಿ ,ಇದಕ್ಕೆ ಶುದ್ಧೀಕರಿಸಿದ ನೀರಿನ ಒಂದು ಭಾಗವನ್ನು ಸ್ಪ್ರೇ ಬಾಟಲಿನಲ್ಲಿ ಸೇರಿಸಿ. ಇದನ್ನು ನಿಮ್ಮ ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಿ.

ಒಂದು ಬಟ್ಟಲಿನಲ್ಲಿ ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಹತ್ತಿಯನ್ನು ಬಳಸಿ ನಿಮ್ಮ ಮುಖದ ಮೇಲೆ ಹಚ್ಚುವ ಮೂಲಕ ಈ ಮಿಶ್ರಣವನ್ನು ಮೇಕಪ್ ಹೋಗಲಾಡಿಸುವ ಸಾಧನವಾಗಿ ನೀವು ಬಳಸಬಹುದು.

ಕೆಟ್ಟ ಕೊಲೆಸ್ಟ್ರಾಲ್, ಕೊಬ್ಬನ್ನು ಕರಗಿಸಲು ಮೊಳಕೆ ಸೇವಿಸಿ

Follow Us on :-