ಗೋಡಂಬಿಯಲ್ಲಿರುವ ಪೌಷ್ಟಿಕಾಂಶವು ಅಷ್ಟೇ ಶ್ರೀಮಂತವಾಗಿವೆ

ಗೋಡಂಬಿ ಎಂದರೆ ಕೊಂಚ ದುಬಾರಿ ಬೆಲೆಯ ಆಹಾರ ಪದಾರ್ಥ. ಇದನ್ನು ಸವಿಯುವುದು ಎಂದರೆ ಕೊಂಚ ಕಷ್ಟ ಎನಿಸಬಹುದು. ಗೋಡಂಬಿಯ ಬೆಲೆ ಹೆಚ್ಚಾಗಿರುವಂತೆಯೇ ಇದರಲ್ಲಿ ಇರುವ ಪೌಷ್ಟಿಕಾಂಶವು ಅಷ್ಟೇ ಶ್ರೀಮಂತವಾಗಿವೆ. ಗೋಡಂಬಿಯಲ್ಲಿ ಕ್ಯಾಲೋರಿಗಳು, ಕಬ್ಬಿಣಾಂಶ, ಪ್ರೋಟೀನ್ ಮತ್ತು ಪೋಷಕಾಂಶವು ಅಧಿಕ ಪ್ರಮಾಣದಲ್ಲಿವೆ. ಹಾಗಾಗಿ ಇದನ್ನು ಸವಿಯುವುದರಿಂದ ಆರೋಗ್ಯದಲ್ಲಿ ಮಹತ್ತರವಾದ ಬದಲವಾವಣೆಯನ್ನು ಸಹ ಗಮನಿಸಬಹುದು.

photo credit social media

ಗೋಡಂಬಿಯು ಒಣ ಬೀಜಗಳ ಗುಂಬಿಗೆ ಸೇರಿದೆ. ಇದರಲ್ಲಿ ಆರೋಗ್ಯಕರವಾದ ಕೊಬ್ಬಿನಾಮ್ಲಗಳಿವೆ. ಈ ಒಣ ಬೀಜವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕೆಂದಿಲ್ಲ. ಬೆರಳೆಣಿಕೆಯಷ್ಟು ಗೋಡಂಬಿ ಸವಿದರೆ ಸಾಕು. ಗಣನೀಯವಾಗಿ ಬೆರಳೆಣಿಕೆಯ ಗೋಡಂಬಿಯನ್ನು ಸವಿದರೂ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ವೈದ್ಯರ ಪ್ರಕಾರ ದಿನಕ್ಕೆ ಕೇವಲ ಐದು ಗೋಡಂಬಿಯನ್ನು ಸವಿದರೆ ಸಾಕು. 45ರಷ್ಟು ಕ್ಯಾಲೋರಿ, 2 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್, 4ಗ್ರಾಂ.ನಷ್ಟು ಕೊಬ್ಬು, 1 ಗ್ರಾಂ ನಷ್ಟು ಪ್ರೋಟೀನ್ ಅನ್ನು ನೀಡುವುದು. ಅಧಿಕ ನಾರಿನಂಶ ಹೊಂದಿರುವ ಈ ಉತ್ಪನ್ನವನ್ನು ಸೇವಿಸುವುದರಿಂದ ನಂಬಲಾಗದಷ್ಟು ಆರೋಗ್ಯಕರ ಸಂಗತಿಯನ್ನು ಪಡೆಯಬಹುದು ಎಂದು ಹೇಳಲಾಗುವುದು.

ಗಣನೀಯವಾಗಿ ಗೋಡಂಬಿಯನ್ನು ಸೇವಿಸುವುದರಿಂದ ಖಿನ್ನತೆ ಮತ್ತು ಆತಂಕ ಭಾವನೆಯು ನಿವಾರಣೆಯಾಗುವುದು. ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹಾಗೂ ಆರ್ಥಿಕ ಸ್ಥಿತಿಯಿಂದಾಗಿ ಜನರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂತಹ ಜನರು ತಮ್ಮ ಆಹಾರದಲ್ಲಿ ಗಣನೀಯವಾಗಿ ಗೋಡಂಬಿಯನ್ನು ಬಳಸುವುದರಿಂದ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು.

ಮಧು ಮೇಹಿಗಳು ಮತ್ತು ದೇಹದಲ್ಲಿ ಅತಿಯಾಗಿ ಕಡಿಮೆ ತೂಕ ಹೊಂದಿರುವವರು ನಿತ್ಯವೂ ಗೋಡಂಬಿಯನ್ನು ಸವಿಯಬಹುದು. ಇದರಲ್ಲಿ ಇರುವ ಶಕ್ತಿ, ಪ್ರೋಟೀನ್, ಕೊಬ್ಬು ಮತ್ತು ನಾರಿನಂಶಗಳು ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ಸಹಾಯ ಮಡುವುದು. ಜೊತೆಗೆ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುವುದು.

ದೇಹದಲ್ಲಿ ತೂಕ ಕಡಿಮೆ ಇರುವವರು ನಿತ್ಯವೂ ಗೋಡಂಬಿಯನ್ನು ಸವಿಯಬಹುದು. ಮಧುಮೇಹಿಗಳು ವಾರದಲ್ಲಿ ಎರಡು ಬಾರಿ ಸವಿಯಬಹುದು ಎಂದು ಸಲಹೆ ನೀಡಲಾಗುವುದು. ಮಧು ಮೇಹಿಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿ ಇಡಲು ಸಹಾಯ ಮಾಡುವುದು.

ಮೇಲಿನ ವಿವರಣೆಯಲ್ಲಿ ಹೇಳಿರುವ ಹಾಗೆ ಇದು ಸಮೃದ್ಧವಾದ ಕ್ಯಾಲೋರಿಯನ್ನು ಮತ್ತು ನಾರಿನಂಶಗಳನ್ನು ಒಳಗೊಂಡಿದೆ. ಈ ಎರಡು ಅದ್ಭುತ ಗುಣಗಳು ತೂಕ ಇಳಿಸಲು ಯೋಜನೆ ಹೊಂದಿದವರಿಗೆ ಸಹಾಯ ಆಗುವುದು. ಬೆರಳೆಣಿಕೆಯ ಗೋಡಂಬಿಗಳನ್ನು ಸವಿದರೆ ಸಾಕಷ್ಟು ಸಮಯಗಳ ಕಾಲ ಹಸಿವನ್ನು ಹಿಡಿದಿಡುವುದು.

ನಿದ್ರಾ ಹೀನತೆಯನ್ನು ಅನುಭವಿಸುವವರು ರಾತ್ರಿ ಮಲಗುವ ಮುನ್ನ ಬೆರಳೆಣಿಕೆಯಷ್ಟು ಗೋಡಂಬಿಯನ್ನು ಸವಿಯಬೇಕು. ಆಗ ಉತ್ತಮ ನಿದ್ರೆಯನ್ನು ಹೊಂದಬಹುದು. ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ನಿದ್ರಾ ಹೀನತೆಯ ಸಮಸ್ಯೆಯು ನಿವಾರಣೆಯಾಗುವುದು.

ಚಿರಯವ್ವನ ಪಡೆಯಲು ಇಲ್ಲಿವೆ ಸರಳ ಆಹಾರಗಳು

Follow Us on :-