ಈ ಐದು ಆಹಾರಗಳಿಂದ ಏಕಾಗ್ರತೆಗೆ ಭಂಗವಾಗಬಹುದು

ಕೆಲವೊಮ್ಮೆಎಷ್ಟೇ ಪ್ರಯತ್ನಪಟ್ಟರೂ ನಾವು ಓದುವ ಅಥವಾ ಮಾಡುವ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎನಿಸಬಹುದು. ಇದಕ್ಕೆ ನಾವು ಸೇವಿಸುವ ಆಹಾರವೂ ಕಾರಣ. ಏಕಾಗ್ರತೆಗೆ ಭಂಗ ತರುವ ಆಹಾರಗಳು ಯಾವುವು ನೋಡಿ.

Photo Credit: Social Media

ನಾವು ತಿನ್ನುವ ಆಹಾರ ದೈಹಿಕ ಮಾತ್ರವಲ್ಲ, ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ

ಕೇಕ್, ಪೇಸ್ಟ್ರಿಗಳು, ಬಿಳಿ ಬ್ರೆಡ್ ನಂತಹ ಸಂಸ್ಕರಿತ ಆಹಾರಗಳು ಏಕಾಗ್ರತೆ ಕುಂಠಿತಮಾಡಬಹುದು

ಅತಿಯಾದ ಉಪ್ಪಿನ ಅಂಶವಿರುವ ಆಹಾರ ನಮ್ಮ ಮೆದುಳಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ

ಸೋಡಾ ಅಥವಾ ಕೃತಕ ಸಕ್ಕರೆ ಅಂಶವಿರುವ ಜ್ಯೂಸ್ ಗಳ ಸೇವನೆಯಿಂದ ಏಕಾಗ್ರತೆ ಕೊರತೆಯುಂಟಾಗಬಹುದು

ಕೆಫೈನ್ ಅಂಶವಿರು ಕಾಫಿ ಸೇವನೆಯಿಂದ ಆತಂಕ ಹೆಚ್ಚಿ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗದು

ಕೆಫೈನ್ ಅಂಶದ ಪಾನೀಯದಂತೇ ಎನರ್ಜಿ ಡ್ರಿಂಕ್ ಗಳೂ ತಾತ್ಕಾಲಿಕ ಶಕ್ತಿಯನ್ನಷ್ಟೇ ನೀಡಬಲ್ಲದು

ಹೀಗಾಗಿ ನಾವು ಸೇವಿಸುವ ಆಹಾರವು ನಮ್ಮ ಮಾನಸಿಕ ಆರೋಗ್ಯವನ್ನೂ ಕಾಪಾಡುವಂತಿರಬೇಕು

ಬೆಂಡೆಕಾಯಿ ಲೋಳೆ ಹೋಗಲಾಡಿಸಲು ಟಿಪ್ಸ್

Follow Us on :-