ಸೌತೆಕಾಯಿ ದೇಹಕ್ಕೆ ತಂಪನ್ನು ನೀಡುತ್ತದೆ: ದಿನ ನಿತ್ಯ ಸೇವಿಸಿ

ಲಘು ಆಹಾರಗಳಲ್ಲಿ ಸೌತೆಕಾಯಿ ಅದ್ಭುತವಾದ ಆಯ್ಕೆ ಆಗುವುದು. ಹೆಚ್ಚು ನೀರಿನಂಶಗಳಿಂದ ಕೂಡಿರುವ ಸೌತೆಕಾಯನ್ನು ವಿವಿಧ ಆಹಾರ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಲಾಡ್‍ಗಳ ರೂಪದಲ್ಲಿ ಇದನ್ನು ಸವಿಯುವುದು ದೇಹಕ್ಕೆ ಹೆಚ್ಚು ಪೋಷಣೆ ನೀಡುವುದು. ಗಣನೀಯವಾಗಿ ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಗಮನಿಸಬಹುದು.

photo credit social media

ಸೌತೆಕಾಯಿ ಬಹುಮುಖ ತರಕಾರಿ. ಇದನ್ನು ಲಘು ಆಹಾರಗಳ ಗುಂಪಿಗೆ ಸೇರಿಸಲಾಗಿದೆ. ಕ್ರಂಚ್ ವಿನ್ಯಾಸದಲ್ಲಿ ಇರುವ ಇದನ್ನು ಸಲಾಡ್ ರೂಪದಲ್ಲಿ ಆನಂದಿಸಲು ಹೆಚ್ಚು ಸಂತೋಷ ದೊರೆಯುವುದು.

ಸ್ಯಾಂಡ್‍ವಿಜ್‍ಗಳಲ್ಲಿ, ಇತರ ತರಕಾರಿಗಳೊಂದಿಗೆ, ಸೌತೆಕಾಯಿ ಕೂಸಂಬರಿ, ಸೌತೆಕಾಯಿ ಜ್ಯೂಸ್ ರೂಪದಲ್ಲಿ ಸವಿಯಬಹುದು. ಇವುಗಳ ಹೊರತಾಗಿಯೂ ಸೌತೆಕಾಯಿ ದೋಸೆ, ಸೌತೆಕಾಯಿ ಸಾಂಬಾರ್, ತಂಬುಳಿ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಬಹುದು.

ಸೌತೆಕಾಯನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಅದು ದೇಹದಲ್ಲಿ ನೀರನ್ನು ಹಿಡಿದಿಡಲು ಸಹಾಯ ಮಾಡುವುದು. ಸೌತೆಕಾಯನ್ನು ಸವಿಯುವುದರಿಂದ ದೇಹದಲ್ಲಿ ನೀರಿನಂಶವನ್ನು ದಿನ ಪೂರ್ತಿ ಹಿಡಿದಿಡುವಂತೆ ಮಾಡುವುದು. ಇದರಲ್ಲಿ ಪ್ರತಿಶತ 90 ರಷ್ಟು ನೀರಿನಂಶ ಇರುತ್ತದೆ ಎಂದು ಹೇಳಲಾಗುತ್ತದೆ.

ನೀರಿನ ಹೊರತಾಗಿ ಸೌತೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಂಶಗಳಿರುವುದು ಕಾಣಬಹುದು. ಇದರಲ್ಲಿ ಪ್ರೋಟೀನ್ ಅನ್ನು ವಿಭಜಿಸುವಂತಹ ಕಿಣ್ವಗಳು ಇವೆ. ಇವು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ.

ಮಲಬದ್ಧತೆ, ಜೀರ್ಣಕ್ರಿಯೆಯ ಸಮಸ್ಯೆ, ಹೊಟ್ಟೆ ಉಬ್ಬರ ಮತ್ತು ನಿರ್ಜಲೀಕರಣವನ್ನು ಅನುಭವಿಸುವವರು ನಿತ್ಯದ ಆಹಾರದಲ್ಲಿ ಸೌತೆಕಾಯನ್ನು ಸೇರಿಸಿಕೊಳ್ಳಬಹುದು. ಇದು ದೇಹಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಾಯ ಮಾಡುವುದು. ಜೊತೆಗೆ ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆಯಲು ಪ್ರಚೋದನೆ ನೀಡುವುದು.

ಕೆಲವರಿಗೆ ಪದೇ ಪದೇ ತಿನ್ನುವುದು, ಚಾಕಲೇಟ್ ಸವಿಯುವುದು ಅಥವಾ ಇನ್ಯಾವುದಾದರೂ ಚಟಗಳನ್ನು ಹೊಂದಿದ್ದರೆ ಅದನ್ನು ತ್ಯಜಿಸಲು ಸೌತೆಕಾಯನ್ನು ಸವಿಯಬಹುದು.

ಚಾಕಲೇಟ್ ಅಥವಾ ಕಾಫಿ ಸವಿಯುವ ಹವ್ಯಾಸವನ್ನು ತ್ಯಜಿಸಲು ಸೌತೆಕಾಯಿ ಉತ್ತಮ ಆಯ್ಕೆ ಆಗುವುದು. ಲಘು ಆಹಾರವಾದ ಸೌತೆಕಾಯನ್ನು ಹವ್ಯಾಸಗಳಿಗೆ ಪರ್ಯಾಯವಾಗಿ ಸೇವಿಸಬಹುದು. ಇದರಲ್ಲಿ ಕ್ಯಾಲೋರಿಯ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ದೇಹದ ತೂಕವನ್ನು ಹೆಚ್ಚಿಸದು.

ಆರೋಗ್ಯದಲ್ಲಿ ಕಿಚಡಿಯ ಪಾತ್ರ ಮಹತ್ವದ್ದು

Follow Us on :-