ಜ್ವರವಿರುವಾಗ ಸ್ನಾನ ಮಾಡಬಹುದೇ

ಜ್ವರವಿದ್ದಾಗ ಸ್ನಾನ ಮಾಡಬಹುದೇ ಎಂಬ ಗೊಂದಲ ಎಲ್ಲರಿಗಿರುತ್ತದೆ. ಜ್ವರವಿದ್ದಾಗ ಸ್ನಾನ ಮಾಡಬಹುದೇ, ಯಾವ ರೀತಿ ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

Photo Credit: Instagram

ವಿಪರೀತ ಜ್ವರವಿದ್ದಾಗ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ

ಆದರೆ ತಾಪಮಾನ ಅತಿಯಾದಾಗ ಮೈಗೆ ಬಿಸಿ ನೀರಿನಿಂದ ಒದ್ದೆ ಬಟ್ಟೆ ಹಾಕಿ ಒರೆಸಿಕೊಳ್ಳಬಹುದು

ಇಲ್ಲವೇ ತಾಪಮಾನ ನಿಯಂತ್ರಣಕ್ಕೆ ತರಲು ಹದ ಬಿಸಿನೀರನ್ನು ಒಮ್ಮೆ ಮೈಮೇಲೆ ಹಾಕಿಕೊಳ್ಳಬಹುದು

ಎರಡು ದಿನಕ್ಕೂ ಹೆಚ್ಚು ಜ್ವರವಿದ್ದಾಗ ಸ್ನಾನ ಮಾಡಲೇಬೇಕೆನಿಸಿದರೆ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಬಹುದು

ಜ್ವರವಿದ್ದಾಗ ಹೆಚ್ಚು ಹೊತ್ತು ನೀರಿಗೆ ಮೈ ಒಡ್ಡಿಕೊಂಡು ನಿಲ್ಲುವುದು ಒಳ್ಳೆಯದಲ್ಲ

ಸ್ನಾನ ಮಾಡಿದರೆ ತಕ್ಷಣವೇ ಒಣ ಬಟ್ಟೆಯಲ್ಲಿ ಮೈ ಸಂಪೂರ್ಣವಾಗಿ ಒರೆಸಿಕೊಳ್ಳಬೇಕು

ಆದರೆ ನೆನಪಿರಲಿ ಜ್ವರವಿರುವಾಗ ತಲೆಸ್ನಾನ ಮಾಡುವುದು ಒಳ್ಳೆಯದಲ್ಲ

ಮೊಸರು ಬಳಸಿ ಮಾಡುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ರೆಸಿಪಿಗಳು

Follow Us on :-