ಮೆದುಳನ್ನು ಕ್ರಿಯಾಶೀಲವಾಗಿಸಲು ಏನು ಮಾಡಬೇಕು?
ನಿಯಮಿತ ಏರೋಬಿಕ್ ವ್ಯಾಯಾಮಗಳಿಂದ ನಿಮ್ಮ ಮೆದುಳಿಗೆ ಸುದೀರ್ಘ ಆರೋಗ್ಯವನ್ನು ನೀಡಬಹುದು. ಮಾನಸಿಕ ದಾರ್ಢ್ಯತೆಗೆ ವಾರಕ್ಕೆ ಮೂರು ಬಾರಿಯಾದರೂ 30 ನಿಮಿಷಗಳ ದೈಹಿಕ ಚಟುವಟಿಕೆ ನಡೆಸಿ.
ಟೆನ್ನಿಸ್, ಕ್ರಿಕೆಟ್ ಅಥವಾ ಸ್ಕ್ವಾಷ್, ಷಟಲ್ ಮಂತಾದ ಆಟವಾಡುವುದರಿಂದ ಏಕಾಗ್ರತೆ ಮತ್ತು ಮಾನಸಿಕ ಜಾಗ್ರತೆ ಸುಧಾರಿಸುತ್ತದೆ.
ನಿಮ್ಮ ರಕ್ತಪರಿಚಲನೆ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿರಿಸಲು ವ್ಯಾಯಾಮ ಉತ್ತಮ ವಿಧಾನವಾಗಿದೆ.
ಸಿಗರೇಟ್ ಸೇವನೆ ತ್ಯಜಿಸುವುದು ಮತ್ತು ಸ್ಯಾಚ್ಯುರೇಟೆಡ್ ಕೊಬ್ಬಿನ ಸೇವನೆ ತಪ್ಪಿಸುವುದರಿಂದ ಮೆದುಳಿಗೆ ವಯಸ್ಸಿಗೆ ಸಂಬಂಧಿಸಿದ ಹಾನಿ ತಪ್ಪುತ್ತದೆ.
ನೀವು ಇತರರಿಗಿಂತ ಬುದ್ಧಿವಂತರಾಗಬೇಕು ಎಂಬ ಅಭಿಲಾಷೆ ಇಲ್ಲವೇ? ಆದರೆ ವಯಸ್ಸು ಏರುತ್ತಿದ್ದಂತೆ ನಮ್ಮ ಕೀಲುಗಳು ಮತ್ತು ಶ್ವಾಸಕೋಶಗಳ ಸಾಮರ್ಥ್ಯ ಕೂಡ ಕುಸಿಯಲಾರಂಭಿಸುತ್ತದೆ
ಮೆದುಳು ಕೂಡ ವಯಸ್ಸಾದಂತೆಲ್ಲ ಶಕ್ತಿ ಕಳೆದುಕೊಳ್ಳುತ್ತದೆಂದು ಯೋಚಿಸಿದರೆ ಭಯವಾಗುವುದಿಲ್ಲವೇ?
ಗಡಿಯಾರದ ಮುಳ್ಳಿನಂತೆ ಮೆದುಳು ಸದಾ ಟಿಕ್ ಟಿಕ್ ಎನ್ನಲು ಇಲ್ಲಿದೆ ಕೆಲವು ಸೂತ್ರಗಳು-
lifestyle
ಅರಿಶಿಣ ಉತ್ತಮ ಔಷಧೀಯ ಗುಣ ಹೊಂದಿದೆ
Follow Us on :-
ಅರಿಶಿಣ ಉತ್ತಮ ಔಷಧೀಯ ಗುಣ ಹೊಂದಿದೆ