ದುಬಾರಿಯಾದರೂ ಒಣಹಣ್ಣಗಳ ಪೈಕಿ ಪಿಸ್ತಾ ನಮಗೆ ಅನೇಕ ಆರೋಗ್ಯಕರ ಲಾಭಗಳನ್ನು ತಂದುಕೊಡುತ್ತದೆ. ಪಿಸ್ತಾ ಸೇವನೆಯಿಂದ ಕೆಲವೊಂದು ಖಾಯಿಲೆಯನ್ನು ದೂರಮಾಡಬಹುದು. ಪಿಸ್ತಾ ಸೇವನೆಯ ಐದು ಲಾಭಗಳು ಯಾವುವು ನೋಡೋಣ.
credit: social media
ವಿಟಮಿನ್ ಬಿ6, ಖನಿಜಾಂಶಗಳು, ಮ್ಯಾಗ್ನಿಶಿಯಂ ಹೇರಳವಾಗಿರುವ ಒಣ ಹಣ್ಣು ಪಿಸ್ತಾ
ದೇಹದ ವಿವಿಧ ಅಂಗಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯ ಪಿಸ್ತಾಗಿದೆ.
ಆಂಟಿ ಆಕ್ಸಿಡೆಂಟ್ ಅಧಿಕವಾಗಿರುವ ಪಿಸ್ತಾದಿಂದ ಕಣ್ಣಿನ ಸಮಸ್ಯೆ ಬರಲ್ಲ.
ಹೃದಯ ಸ್ನೇಹೀ ಒಣ ಹಣ್ಣಾಗಿದ್ದು, ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ಕಾಪಾಡುತ್ತದೆ.
ಕಡಿಮೆ ಕ್ಯಾಲೊರಿ ಇರುವ ಕಾರಣ ತೂಕ ಕಡಿಮೆ ಮಾಡುವವರಿಗೂ ಒಳ್ಳೆಯದು.
ಮ್ಯಾಗ್ನಿಶಿಯಂನಂತಹ ಅಂಶಗಳಿದ್ದು, ಎಲುಬಿನ ಆರೋಗ್ಯ ಸಂರಕ್ಷಿಸುತ್ತದೆ.
ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ತಡೆಯುವ ಗುಣವನ್ನು ಹೊಂದಿದೆ.