Select Your Language

Notifications

webdunia
webdunia
webdunia
webdunia

ಫೈನಲ್‌ಗೆ ಲಗ್ಗೆ ಹಾಕಿದ ಇಂಡಿಯನ್ ಎಕ್ಸ್‌ಪ್ರೆಸ್ ಲೀ-ಹೇಶ್

ಫೈನಲ್‌ಗೆ ಲಗ್ಗೆ ಹಾಕಿದ ಇಂಡಿಯನ್ ಎಕ್ಸ್‌ಪ್ರೆಸ್ ಲೀ-ಹೇಶ್
ಚೆನ್ನೈ , ಭಾನುವಾರ, 9 ಜನವರಿ 2011 (10:13 IST)
PTI
ಭಾರತದ ಅತ್ಯಂತ ಯಶಸ್ವಿ ಡಬಲ್ಸ್ ಜೋಡಿಗಳಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಇಲ್ಲಿ ನಡೆಯುತ್ತಿರುವ ಏರ್‌ಸೆಲ್ ಎಟಿಪಿ ಚೆನ್ನೈ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

ಸುದೀರ್ಘ ಸಮಯದ ನಂತರ ಒಂದಾಗಿ ಆಡುವುದಾಗಿ ಘೋಷಿಸಿದ್ದ ಈ ಭಾರತೀಯ ಜೋಡಿ ಮತ್ತದೇ ಹಳೆಯ ಆಕ್ರಮಣಕಾರಿ ಆಟವನ್ನು ಹೊರಗೆಡವುದರಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಕ್ರೊವೇಶಿಯಾದ ಮರಿನ್ ಸಿಲಿಕ್ ಮತ್ತು ಇವಾನ್ ದೊದಿಗ್ ಜೋಡಿ ಸೊಲೊಪ್ಪಿಕೊಳ್ಳಲೇ ಬೇಕಾಯಿತು.

ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಲೀ-ಹೇಶ್ ಜೋಡಿ ಪಂದ್ಯವನ್ನು 6-1 6-7 (4) 10-5ರ ಅಂತರದಲ್ಲಿ ನಿರ್ಣಾಯಕ ಟ್ರೈ ಬ್ರೇಕರ್‌ನಲ್ಲಿ ವಶಪಡಿಸಿಕೊಳ್ಳುವ ಮೂಲಕ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ಮೊದಲ ಸುತ್ತನ್ನು ಸುಲಭವಾಗಿ ವಶಪಡಿಸಿಕೊಂಡ ಭಾರತೀಯ ಜೋಡಿ ಪಂದ್ಯವನ್ನು ಬೇಗನೇ ಅಂತ್ಯಗೊಳಿಸುವ ಇರಾದೆ ಹೊಂದಿದ್ದರು. ಆದರೆ ದ್ವಿತೀಯ ಸುತ್ತಿನಲ್ಲಿ ತಿರುಗೇಟು ನೀಡಿದ ಕ್ರೊವೇಶಿಯಾ ಜೋಡಿ ಟ್ರೈ ಬ್ರೇಕರ್‌ನಲ್ಲಿ ಸೆಟ್ ವಶಪಡಿಸಿಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಇಂಡಿಯನ್ ಏಕ್ಸ್‌ಪ್ರೆಸ್ ಫೈನಲ್‌ಗೆ ಲಗ್ಗೆಯಿಟ್ಟರು.

ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ ದೇವರ್ಮನ್, ಯೂಕಿ ಭಾಂಬ್ರಿರಂತಹ ಭಾರತೀಯ ಫೇವರೇಟ್‌ಗಳು ಮುಗ್ಗರಿಸಿರುವ ಈ ಸಂದರ್ಭದಲ್ಲಿ ಲೀ-ಹೇಶ್ ಮೇಲೆ ಭಾರತೀಯರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಇದನ್ನು ಕಾಪಾಡುವಲ್ಲಿ ಯಶಸ್ವಿಯಾಗಿರುವ ಭಾರತೀಯ ಜೋಡಿ ಭಾನುವಾರ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸ ಹೊಂದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada