ಬ್ರಿಸ್ಬೆನ್ ಇಂಟರ್‌ನ್ಯಾಷನಲ್ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ಆರನೇ ಶ್ರೇಯಾಂಕಿತ ಆಟಗಾರ್ತಿ ಸಮಂಥಾ ಸ್ಟೊಸುರ್, ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ಜೆಕ್ ಎದುರಾಳಿ ಲೂಸಿಯಾ ರಾಡೆಕಾ ವಿರುದ್ಧ 7-6 (1), 6-1 ಸೆಟ್‌ಗಳಿಂದ ಜಯಗಳಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.
ಅಗ್ರಶ್ರೇಯಾಂಕಿತ ಆಟಗಾರ್ತಿ ಸ್ಟೊಸುರ್, ತಮ್ಮ ಎದುರಾಳಿ ರಾಡೆಕಾ ವಿರುದ್ಧ 1ಗಂಟೆ 30 ನಿಮಿಷಗಳ ಅವಧಿಯಲ್ಲಿ ಸೋಲಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಜರ್ಮಿಲಾ ಗ್ರೊಥ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ಇಸ್ರೇಲ್‌ನ ಎರಡನೇ ಶ್ರೇಯಾಂಕಿತ ಆಟಗಾರ್ತಿ ಶಾಹರ್ ಪೀರ್, ಆಸ್ಟ್ರೇಲಿಯಾದ ವೈಲ್ಡ್ ಕಾರ್ಡ್ ಹೋಲ್ಡರ್ ಸೋಫಿಯಾ ಫೆರ್ಗುಸನ್ ವಿರುದ್ಧ 6-4, 6-2 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.