Select Your Language

Notifications

webdunia
webdunia
webdunia
webdunia

ಸಿಡ್ನಿ ಟೆಸ್ಟ್‌ಗಿಲ್ಲ ಪಾಂಟಿಂಗ್; ಕ್ಲಾರ್ಕ್ ನಾಯಕ

ಸಿಡ್ನಿ ಟೆಸ್ಟ್‌ಗಿಲ್ಲ ಪಾಂಟಿಂಗ್; ಕ್ಲಾರ್ಕ್ ನಾಯಕ
ಸಿಡ್ನಿ , ಗುರುವಾರ, 30 ಡಿಸೆಂಬರ್ 2010 (17:51 IST)
ಕೈ ಬೆರಳಿಗೆ ಗಾಯಮಾಡಿಕೊಂಡಿರುವ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಪಾಂಟಿಂಗ್ ಅನುಪಸ್ಥಿತಿಯಲ್ಲಿ ತಂಡವನ್ನು ಉಪನಾಯಕ ಮೈಕಲ್ ಕ್ಲಾರ್ಕ್ ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 157 ರನ್ನುಗಳಿಂದ ವಶಪಡಿಸಿಕೊಂಡಿದ್ದ ಇಂಗ್ಲೆಂಡ್ ಪ್ರತಿಷ್ಠಿತ ಆಶಸ್ ಸರಣಿಯನ್ನು ಉಳಿಸಿಕೊಂಡಿತ್ತು. ಆದರೆ 1-2ರ ಹಿನ್ನೆಡೆ ಅನುಭವಿಸುತ್ತಿರುವ ಆಸೀಸ್‌ಗೆ ಈ ಪಂದ್ಯವನ್ನು ಗೆದ್ದರಷ್ಟೇ ಪಂದ್ಯ ಸಮಬಲ ಮಾಡಲು ಸಾಧ್ಯವಾಗಲಿದೆ.

ಎಡಗೈಯ ಬೆರಳಿಗೆ ಗಾಯಮಾಡಿಕೊಂಡಿರುವ ಪಾಂಟಿಂಗ್ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ. ಇದೀಗ ಮುಂಬರುವ ವಿಶ್ವಕಪ್ ವೇಳೆಗೆ ಸಂಪೂರ್ಣ ಚೇತರಿಕೆ ಹೊಂದುವ ವಿಶ್ವಾಸವನ್ನು ಆಯ್ಕೆ ಸಮಿತಿ ಹೊಂದಿದೆ.

ಆಶಸ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಪಾಂಟಿಂಗ್ ಎಂಟು ಇನ್ನಿಂಗ್ಸ್‌ಗಳಲ್ಲಾಗಿ 16ರ ಸರಾಸರಿಯಲ್ಲಿ ಕೇವಲ 113 ರನ್ನುಗಳನ್ನಷ್ಟೇ ಗಳಿಸಿದ್ದರು.

ಪಾಂಟಿಂಗ್ ಅಲಭ್ಯತೆಯಲ್ಲಿ ಪಾಕಿಸ್ತಾನ ಮೂಲದ ನ್ಯೂ ಸೌತ್ ವೇಲ್ಸ್ ಆಟಗಾರ ಉಸ್ಮಾನ್ ಖವಾಜಾ ತಮ್ಮ ಟೆಸ್ಟ್ ಪದಾರ್ಪಣೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada