Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಮೇಲೆ ಮೊಟ್ಟೆ, ಕಪ್ಪುಧ್ವಜಗಳನ್ನೆಸೆದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಮೇಲೆ ಮೊಟ್ಟೆ, ಕಪ್ಪುಧ್ವಜಗಳನ್ನೆಸೆದ ಬಿಜೆಪಿ ಕಾರ್ಯಕರ್ತರು
ಚಂಡೀಗಡ್ , ಮಂಗಳವಾರ, 18 ಮಾರ್ಚ್ 2014 (16:23 IST)
ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿ,ನಟಿ, ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಇಂದು ಚುನಾವಣಾ ಅಭಿಯಾನವನ್ನು ಆರಂಭಿಸಲು ನಗರಕ್ಕೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಕಪ್ಪು ಧ್ವಜಗಳನ್ನು ತೋರಿಸಿ, ತಮ್ಮ ಅಸಮ್ಮತಿಯ ಸಂಜ್ಞೆಯುಳ್ಳ ಘೋಷಣೆಗಳನ್ನು ಕೂಗಿದರಲ್ಲದೇ ಮೊಟ್ಟೆಗಳನ್ನು ಎಸೆದ ಘಟನೆ ವರದಿಯಾಗಿದೆ.
PTI

ಬಿಜೆಪಿ ಕಿರಣ್ ಖೇರ್ ಅವರನ್ನು ಚಂಡೀಗಡ್‌ನ ಅಭ್ಯರ್ಥಿಯನ್ನಾಗಿ ಘೋಷಿಸಿದ ಕಾರಣಕ್ಕೆ ಅತ್ರಪ್ತರಾಗಿರುವ ಪಕ್ಷದ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಗೆ ಅವರು ಆಗಮಿಸಿದ ಸಂದರ್ಭದಲ್ಲಿ "ಕಿರಣ್ ಖೇರ್ ಹಿಂತಿರುಗಿ" ಎಂಬ ಘೋಷಣೆಗಳನ್ನು ಕೂಗಿ ಉದ್ರಿಕ್ತ ವಾತಾವರಣ ಸೃಷ್ಟಿಸಿದರು.

ಚಂಡೀಗಡ್‌ದ ಬಿಜೆಪಿ ಅಧ್ಯಕ್ಷ ಸಂಜಯ್ ಟಂಡನ್, ಮಾಜಿ ಸಂಸದ ಸತ್ಯ ಪಾಲ್ ಜೈನ್ ಮತ್ತು ಮಾಜಿ ಕೇಂದ್ರ ಸಚಿವ ಹರಮೋಹನ್ ಧವನ್‌ ರಂತಹ ಸ್ಥಳೀಯ ನಾಯಕರು ಈ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಆ ಕ್ಷೇತ್ರದಲ್ಲಿ ಕಿರಣ್ ಖೇರ್ ಗೆ ಟಿಕೆಟ್ ನೀಡಿದ್ದರಿಂದ ಆಕ್ರೋಶ ಎದುರಾಗಿದೆ. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಧವನ್ ಬೆಂಬಲಿಗರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

Share this Story:

Follow Webdunia kannada