ಬಿಜೆಪಿ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿ ತನ್ನ ಸಹೋದರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ನಿರಾಕರಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) 34 ವರ್ಷದ ನಾಯಕ ವರುಣ್‌ಗಾಂಧಿ ಸುಲ್ತಾನ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. "ರಾಜಕೀಯ ಸಭ್ಯತೆಯಲ್ಲಿ ನಾನು ನಂಬಿಕೆಯನ್ನು ಹೊಂದಿದ್ದು ಮತ್ತು ತಮ್ಮ ಎದುರಾಳಿಗಳ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಯಸಲಾರೆ" ಎಂದು ಮಾಧ್ಯಮಕ್ಕೆ ಅವರು ಹೇಳಿದರು.
" ನಾನು ರಾಜಕೀಯದಲ್ಲಿ ಸಕಾರಾತ್ಮಕ ಮನಸ್ಸನ್ನು ಹೊಂದಿದ್ದೇನೆ ಮತ್ತು ಯಾವಾಗಲೂ ನಾನು ಸಭ್ಯತೆಯ ಕೆಲವು ಸಾಲುಗಳಲ್ಲಿ ನಂಬಿಕೆಯನ್ನು ಹೊಂದಿದ್ದು, ಅದನ್ನು ದಾಟಲು ಎಂದಿಗೂ ಪ್ರಯತ್ನಿಸಲಾರೆ" ಎಂದಿರುವ ಅವರು "ನೆರೆಯ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಚಾರ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ
ಪಿಲಿಭಿಟ್ ಲೋಕಸಭೆ ಕ್ಷೇತ್ರದ ಹಾಲಿ ಸಂಸದನಾಗಿರುವ ವರುಣ್ ಗಾಂಧಿ, ಈ ಬಾರಿ ಸುಲ್ತಾನ್‌ಪುರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದ ಅನೊಲಾದ ಸಂಸದೆಯಾಗಿರುವ ವರುಣ್ ಗಾಂಧಿ ತಾಯಿ ಮೇನಕಾ ಗಾಂಧಿ 2014 ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ತಾನು ಪ್ರತಿನಿಧಿಸುತ್ತಿದ್ದ ಪಿಲಿಭಿಟ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ.