ಫ್ರೀಡಂ ಈಸ್ ನಾಟ್ ಫ್ರೀ....

Webdunia
ಕೆ.ಎನ್. ಸತೀಶ್
ಇದು ಅರುವತ್ತೆರಡನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಭಾರತೀಯರಿಗೆ. ಕಳೆದ ಅರವತ್ತೊಂದು ವರ್ಷಗಳಲ್ಲಿ ಭಾರತೀಯರು ಕ್ರಮವಾಗಿ ಉತ್ತಮ ಪ್ರಗತಿಯನ್ನು ಕೂಡ ಸಾಧಿಸಿದ್ದಾರೆ. ಆದರೆ ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಎಷ್ಟು ಕಷ್ಟವಿತ್ತು. ಅದೆಷ್ಟು ಮಂದಿ ಬಲಿದಾನ ಮಾಡಿದರು ಎನ್ನುವುದು ಸ್ವಾತಂತ್ರ್ಯಾ ನಂತರ ಜನಿಸಿದ ಮಂದಿಗೆ ತಿಳಿದಿರಲಾರದು.

ND
ಶಿವ್ ಖೇರಾ ಇದೇ ವಿಷಯವನ್ನೇ ಆರಿಸಿಕೊಂಡು ಬರೆದಿರುವ ಪುಸ್ತಕದ ಹೆಸರು 'ಫ್ರೀಡಂ ಈಸ್ ನಾಟ್ ಫ್ರೀ'. ಬ್ರಿಟೀಷರು, ಭಾರತೀಯರನ್ನು ಗುಲಾಮರಂತೆ ಕಾಣುತ್ತಿದ್ದ ಸಂದರ್ಭದಲ್ಲಿಯೇ ಅವರನ್ನು ಎದುರಿಸಿ ಸ್ವಾತಂತ್ರ್ಯ ಪಡೆದದ್ದು ಸಣ್ಣ ಸಾಧನೆಯೇನಲ್ಲ. ಇದಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದವರ ಪಟ್ಟಿ ಬಹಳ ದೊಡ್ಡದಿದೆ.

200 ವರ್ಷಗಳ ಕಾಲ ಭಾರತದ ಸಂಪತ್ತನ್ನು ದೋಚಿದ ಬ್ರಿಟೀಷರನ್ನು ಎದುರಿಸಲು ಗಾಂಧಿ ಎಂಬ ಮಹಾನ್ ವ್ಯಕ್ತಿಯೊಬ್ಬ ಬಾರದೇ ಹೋಗಿದ್ದಿದ್ದರೆ, ಭಾರತದ ಸ್ವಾತಂತ್ರ್ಯ ಇನ್ನಷ್ಟು ಮುಂದಕ್ಕೆ ಹೋಗುತ್ತಿತ್ತೇನೋ. ಈ ಹಿಂದೆ 1857ರಲ್ಲಿ ನಡೆದ ಸಿಪಾಯಿ ದಂಗೆ ಯಶಸ್ವಿಯಾಗಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಬಹಳ ಕಾಲವಾಗಿರುತ್ತಿತ್ತು. ಆದರೆ ಬ್ರಿಟೀಷರು ಹಾಗಾಗಲು ಬಿಡಲಿಲ್ಲ. ಭಾರತೀಯರ ಬಲಹೀನತೆಗಳನ್ನು ಉಪಯೋಗಿಸಿಕೊಂಡೇ ನಂತರದ 90 ವರ್ಷಗಳನ್ನು ಆಳಿಬಿಟ್ಟರು.

ದಕ್ಷಿಣ ಆಫ್ರಿಕಾದಿಂದ ಬಂದಿಳಿದ ಗಾಂಧಿ, 20 ಲಕ್ಷ ಮಂದಿ ಭಾರತೀಯರ ಮನಸ್ಸು ಮತ್ತು ದೇಹ ಒಂದೇ ಎನ್ನುವ ಭಾವನೆಯನ್ನು ತುಂಬಿದರು. ಬಹುತೇಕ ಭಾರತೀಯರಿಗೆ ತಾವೊಬ್ಬ ಅರೆ ದಿಗಂಬರ ಎನ್ನುವ ಮ‌ೂಲಕ ಪ್ರೇರೇಪಣೆ ನೀಡಿದರು. ಸ್ವಾತಂತ್ರ್ಯ, ತಮ್ಮ ದೇಶವಾಸಿಗಳ ಹಕ್ಕು ಎನ್ನುವುದನ್ನು ಅಹಿಂಸಾ ಪದ್ಧತಿಯ ಮೂಲಕವೇ ಪ್ರತಿಪಾದಿಸಿದರು.

ಆದರೆ ಬ್ರಿಟೀಷರ ಶಿಕ್ಷೆ ಅದೆಷ್ಟು ತೀವ್ರವಾಗಿತ್ತೆಂದರೆ, ಮನುಷ್ಯನೊಬ್ಬನನ್ನು ಈ ರೀತಿಯ‌ೂ ಶಿಕ್ಷಿಸಬಹುದೆಂದು ಹಿಟ್ಲರ್ ಕಲಿತುಕೊಂಡು ಅನುಷ್ಟಾನಕ್ಕೆ ತಂದದ್ದರ ಹಿಂದೆ ಅವರ ಪ್ರಭಾವ ಇತ್ತೆಂದರೆ, ಶಿಕ್ಷೆಯ ತೀವ್ರತೆಯನ್ನು ಅರಿತುಕೊಳ್ಳಬಹುದು.

ಈ ಕುರಿತಂತೆ ಅನೇಕ ಚಿತ್ರಗಳು ಸಹ ತಯಾರಾಗಿದ್ದರೂ ಸಹ ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ 'ಕಾಲಾಪಾನಿ', ಅಂದಿನ ಶಿಕ್ಷೆಯ ಪರಿಚಯವನ್ನು ಮಾಡಿಸುತ್ತದೆ. ದೂರದ ಅಂಡಮಾನ್ ದ್ವೀಪಕ್ಕೆ ಕರೆದೊಯ್ದು ಅವರಿಂದ ದುಡಿಮೆಯನ್ನು ಮಾಡಿಸಲಾಗುತ್ತಿತ್ತು. ಸಾಧ್ಯವಾಗದವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿತ್ತು.

ಇದೇ ರೀತಿಯ ಮತ್ತೊಂದು ಚಿತ್ರವೆಂದರೆ ತೆಲುಗಿನ ಚಿರಂಜೀವಿ ನಟಿಸಿರುವ 'ವೇಟ' ಚಿತ್ರ. ಈ ಚಿತ್ರದಲ್ಲಿ ಅಂಡಮಾನ್ ಸೆರೆಮನೆಗಳು ಹೇಗಿದ್ದವು, ಡಂಜನ್ ಎಂದು ಹೆಸರಿಸಲಾಗುವ ಆಳದ ಕತ್ತಲ ಬಂದೀಖಾನೆಗಳು ಹೇಗಿರುತ್ತಿದ್ದವು ಎಂದು ತೋರಿಸಿದ್ದಾರೆ. ಸತ್ತವನನ್ನು ಹೇಗೆ ಗೋಣಿಚೀಲದಲ್ಲಿ ತುಂಬಿ ಸಮುದ್ರಕ್ಕೆ ಎಸೆಯುತ್ತಿದ್ದರು ಎಂಬ ಚಿತ್ರಣ ಇದೆ.

ಬ್ರಿಟೀಷರು ನೀಡುತ್ತಿದ್ದ ಶಿಕ್ಷೆಗಳ ಭೀಕರತೆ ಎಂತಹವರನ್ನೂ ಗಾಬರಿಗೊಳಿಸುವಂತೆ ಇತ್ತು. ಭಾರತೀಯರನ್ನು ಶಿಕ್ಷೆಯ ಪ್ರಯೋಗಪಶುಗಳನ್ನಾಗಿ ಮಾಡಿಕೊಂಡು ಬಿಟ್ಟಿದ್ದರು ಅವರು. ಚರ್ಮ ಸುಲಿದರೆ ಮನುಷ್ಯ ಹೇಗೆ ಕಾಣುತ್ತಾನೆ. ಉಗುರು ಕಿತ್ತರೆ ಏನಾಗುತ್ತದೆ. ನಾಲಿಗೆ ಕತ್ತರಿಸಿದರೆ ಮಾತನಾಡಲು ಆಗುತ್ತದೆಯೇ, ಆಳವಾದ ಗಾಯ ಮಾಡಿ ಖಾರದ ಪುಡಿ ತುಂಬಿದರೆ ನೋವಾಗುತ್ತದೆಯೇ ಎನ್ನುವುದು ದೈಹಿಕ ಹಿಂಸೆಗಳಾಗಿದ್ದವು.

ಬ್ರಿಟೀಷರು ಭಾರತೀಯರ ಭಾವನಾತ್ಮಕತೆಯ ಜೊತೆ ಸಹ ಆಟವಾಡುತ್ತಿದ್ದರು. ಮನೆಯ ಸದಸ್ಯರನ್ನು ಬಂಧಿಸಿ, ಉಗ್ರ ಶಿಕ್ಷೆ ನೀಡಿ, ಇಬ್ಬರಲ್ಲಿ ಒಬ್ಬರು ಬದುಕುಳಿಯಬೇಕೆಂದರೆ, ಇಬ್ಬರೂ ಪರಸ್ಪರ ಹೋರಾಟ ಮಾಡಿ ಒಬ್ಬನನ್ನು ಕೊಂದು ಮತ್ತೊಬ್ಬ ಉಳಿಯಬೇಕು ಎಂದು ಸ್ಪರ್ಧೆಯನ್ನು ಒಡ್ಡುತ್ತಿದ್ದರು. ಟಿಪ್ಪು ಸುಲ್ತಾನನ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ಯಾವುದೇ ಪೋಷಕರಿಗೂ ಹೃದಯ ವಿದ್ರಾವಕವೇ.

ಮನೆ ಸದಸ್ಯರನ್ನೇ ಗೂಢಚಾರರನ್ನಾಗಿಸಿ ಅವರೊಳಗೆ ಭೇದ ತಂದಿಡುತ್ತಿದ್ದರು. ಅವರು ಅನುಸರಿಸಿದ ಪ್ರಮುಖ ತಂತ್ರವೆಂದರೆ ಇದೇ. ಡಿವೈಡ್ ಅಂಡ್ ರೂಲ್ ಪದ್ಧತಿ.

ಸ್ವಾತಂತ್ರ್ಯ ಹೋರಾಟಗಾರರು ಮತ್ತೆ ಅಂತಹ ಪ್ರಯತ್ನಕ್ಕೆ ಕೈಹಾಕಬಾರದೆಂದು, ಬಂಧಿತನನ್ನು ಸಾಮ‍ೂಹಿಕವಾಗಿ ಶಿಕ್ಷೆ ನೀಡುತ್ತಿದ್ದ ಪದ್ಧತಿ ಸಾರ್ವಜನಿಕರಲ್ಲಿ ಭಯವನ್ನೂ ಮತ್ತು ದುಃಖವನ್ನು ಏಕಕಾಲಕ್ಕೆ ಉಂಟು ಮಾಡುತ್ತಿದ್ದವು.

ಆದರೆ ಇವೆಲ್ಲಾ ಶಿಕ್ಷೆಯನ್ನು ಅನುಭವಿಸಿಯ‌ೂ ಸ್ವಾತಂತ್ರ್ಯ ಗಳಿಸಿದ್ದಕ್ಕೆ, ಅಮೆರಿಕದ ಸ್ವಾತಂತ್ರ್ಯ ಗಳಿಕೆಯ‌ೂ ಸಹ ಪ್ರೇರೇಪಣೆ ನೀಡಿತ್ತು. ಅಲ್ಲಿ 56 ಮಂದಿ ಒಂದೇ ಸಾರಿಗೆ ನೇಣಿಗೆ ಕೊರಳೊಡ್ಡಲು ಸಿದ್ಧರಾಗಿದ್ದರು ಎನ್ನುವುದು ಕೆಲವರಲ್ಲಿ ಉತ್ತೇಜನವನ್ನೂ ನೀಡಿತ್ತು.

ಸ್ವಾತಂತ್ರ್ಯ ಕಳೆದುಕೊಂಡರೆ ಏನಾಗುತ್ತದೆ ಎನ್ನುವುದನ್ನು ಅಬ್ರಹಾಂ ಲಿಂಕನ್ ತಿಳಿಸುತ್ತಾ, ಮನುಷ್ಯನ ಸ್ವಾತಂತ್ರ್ಯವನ್ನು ಕಳೆದರೆ ಅವನಲ್ಲಿ ಶೀಲವನ್ನೂ, ಧೈರ್ಯವನ್ನೂ ತುಂಬುವುದು ಸಾಧ್ಯವಿಲ್ಲ ಎಂದಿದ್ದಾನೆ.

ಈಗ ಅನುಭವಿಸುತ್ತಿರುವ ಸ್ವಾತಂತ್ರ್ಯ ಅದೆಷ್ಟೋ ಪ್ರಾಣಹಾನಿಯ ಪ್ರತಿಫಲವಾಗಿದೆ. ಚಿತ್ರಹಿಂಸೆಯಿಂದ ಕಣ್ಣೀರು ಹಾಕಿದ್ದರ ಒಂದು ಅಂಶವಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

Show comments