Entertainment Bollywood Preview 0708 02 1070802025_1.htm

Select Your Language

Notifications

webdunia
webdunia
webdunia
webdunia

ಗಾಂಧಿ ಮೈ ಫಾದರ್ ಬಿಡುಗಡೆಗೆ ಸಿದ್ಧ

ಗಾಂಧಿ ಮೈ ಫಾದರ್
ಮಹಾತ್ಮಾ ಗಾಂಧಿ ಹಾಗೂ ಅವರ ಹಿರಿಯ ಮಗ ಹರಿಲಾಲ್ ನಡುವಿನ ಸಂಬಂಧಗಳನ್ನನಾವರಣಗೊಳಿಸಲಿರುವ 'ಗಾಂಧಿ ಮೈ ಫಾದರ್' ಚಿತ್ರ ಬಿಡುಗಡೆಯ ಸಿದ್ಧತೆಯಲ್ಲಿದೆ.

ಈ ಚಿತ್ರ ಶುಕ್ರವಾರ ನ್ಯೂಯಾರ್ಕ್ ಮ್ಯೂಸಿಯಂವೊಂದರಲ್ಲಿ ಪ್ರದರ್ಶಿತಗೊಳ್ಳಲಿದೆ. ಈ ಹಿಂದೆ ಅನಿಲ್ ಕಪೂರ್ ನಿರ್ಮಾಣದಲ್ಲಿ ತಯಾರಿತಗೊಂಡ ವಿವಾದಾಸ್ಪದ ಚಿತ್ರ ಇಲ್ಲಿ ಪ್ರದರ್ಶಿತಗೊಂಡಿತ್ತು. ಅಲ್ಲದೆ, ಶಾರೂಖ್ ಖಾನ್ ಅವರ ದೇವದಾಸ್ ಚಿತ್ರವು ಇಲ್ಲಿ ಪ್ರದರ್ಶಿತಗೊಂಡಿರುವುದು ವಿಶ್ವದ ಸಿನೆಮಾ ಸರಣಿಯಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿತ್ತು.

ಭಾರತೀಯ ಚಿತ್ರರಂಗದ ಉತ್ತಮ ಕಥಾ ಬರಹಗಾರರಾಗಿರುವ ಫಿರೋಜ್ ಅಬ್ಬಾಸ್ ಖಾನ್ ಅವರು ನಿರ್ದೇಶಿಸಿರುವ ಗಾಂಧಿ ಮೈ ಫಾದರ್ ಚಿತ್ರವು ಒಟ್ಟು 128 ನಿಮಿಷಗಳದ್ದಾಗಿದೆ. ಇದರಲ್ಲಿ ಗಾಂಧಿಯಾಗಿ ದರ್ಶನ್ ಜರಿವಾಲಾ ಅವರು ನಟಿಸಿದ್ದರೆ, ಅವರ ಮಗ ಹರಿಲಾಲ್‌ರ ಪಾತ್ರವನ್ನು ಅಕ್ಷಯ್ ಖನ್ನಾ ತುಂಬಿದ್ದಾರೆ. ಈ ಚಿತ್ರವು ಆಗಸ್ಟ್ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.

ಒಂದು ರೀತಿಯಲ್ಲಿ ಚಿತ್ರದ ವಿಷಯವೇ ವಿವಾದಾಸ್ಪದವಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯು ತಮ್ಮ ಮಗ ಹರಿಲಾಲ್‌ಗೆ ತಕ್ಕ ತಂದೆಯಾಗಿ ತಪ್ಪು ಎಸೆಗಿದ್ದಾರೆ ಎಂದು ಬಿಂಬಿಸಿರುವ ಈ ಚಿತ್ರದಲ್ಲಿ, ಸಾಕಷ್ಟು ಮಂದಿ ಭಾರತೀಯರು ಈ ಸತ್ಯವನ್ನು ಕಂಡುಕೊಳ್ಳುವಲ್ಲಿ ಎಡವಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada