Select Your Language

Notifications

webdunia
webdunia
webdunia
webdunia

ಇಂದಿನಿಂದ ಪ್ಯಾರಾಲಿಂಪಿಕ್ಸ್

ಇಂದಿನಿಂದ  ಪ್ಯಾರಾಲಿಂಪಿಕ್ಸ್
ನವದೆಹಲಿ , ಬುಧವಾರ, 7 ಸೆಪ್ಟಂಬರ್ 2016 (08:28 IST)
ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ಬುಧವಾರದಿಂದ 15 ನೇ ಪ್ಯಾರಾಲಿಂಪಿಕ್ಸ್ ಆರಂಭವಾಗಲಿದ್ದು ಮರಕಾನ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 

ಸೆಪ್ಟೆಂಬರ್ 18ರವರೆಗೆ ಪಂದ್ಯಾವಳಿ ನಡೆಯುತ್ತಿದ್ದು ಒಟ್ಟು 23 ಕ್ರೀಡೆಯ 528 ವಿಭಾಗಗಳಲ್ಲಿ ಪೈಪೋಟಿ ನಡೆಯಲಿದೆ.
 
ಒಟ್ಟು 162 ರಾಷ್ಟ್ರಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು 1,500ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ 17 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. 
 
1960ರಿಂದ ಪ್ರಾರಂಭವಾದ ಈ ಕ್ರೀಡಾಕೂಟದಲ್ಲಿ ಭಾರತ ಈ ವರೆಗೆ 8 ಪದಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. 
 
ರಿಯೋ ಓಲಂಪಿಕ್ಸ್ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಘೋಷಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ ಚಿನ್ನ ಗೆದ್ದವರಿಗೆ 75 ಲಕ್ಷ, ಬೆಳ್ಳಿ ಗೆದ್ದವರಿಗೆ 50 ಲಕ್ಷ ಮತ್ತು ಕಂಚು ಗೆದ್ದವರಿಗೆ 30 ಲಕ್ಷ ನೀಡುವುದಾಗಿ ಘೋಷಿಸಿದೆ. 
 
2004ರಲ್ಲಿ ನಡೆದ ಅಥೆನ್ಸ್ ಓಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ಸಹ ಆ ನಿರೀಕ್ಷೆಯನ್ನಿಟ್ಟಿದ್ದಾರೆ. 
 
ಪವರ್ ಲಿಫ್ಟರ್ ಫರ್ಮಾನ್ ಬಾಷಾ -ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ. 
 
ಭಾರತ ತಂಡ : ಪೂಜಾ (ಆರ್ಚರಿ), ನರೇಶ್ ಕುಮಾರ್ ಶರ್ಮಾ (ಶೂಟಿಂಗ್), ಶರದ್  ವರುಣ್ ಸಿಂಗ್ ಭಾಟಿ (ಹೈಜಂಪ್), ಮರಿಯಪ್ಪನ್ ತಂಗವೇಲು (ಹೈಜಂಪ್), ಶರದ್ ಕುಮಾರ್ (ಹೈ ಜಂಪ್), ರಾಂಪಾಲ್ (ಹೈ ಜಂಪ್)  ಸುಂದರ್ ಸಿಂಗ್ ಗುರ್ಜಾರ್ (ಜಾವೆಲಿನ್) , ದೇವೇಂದ್ರ ಜಜಾರಿಯಾ (ಜಾವೆಲಿನ್) ರಿಂಕು (ಜಾವೆಲಿನ್), ನರೇಂದರ್ ರಣಬೀರ್ (ಜಾವೆಲಿನ್), ಸಂದೀಪ್ (ಜಾವೆಲಿನ್), ಅಮಿತ್ ಕುಮಾರ್ ಸರೋಹ (ಕ್ಲಬ್ ಥ್ರೋ), ದೀಪಾ ಮಲಿಕ್ (ಶಾಟ್‌ಪಟ್), ಧರ್ಮವೀರ (ಕ್ಲಬ್ ಥ್ರೋ) , ಅಂಕುರ್ ಧಾಮಾ (1,500ಮೀ ಓಟ) ಫರ್ಮಾನ್ ಬಾಷಾ ( ಪವರ್ ಲಿಫ್ಟರ್) ಸುಯಾಷ್ ನಾರಾಯಣ್ ಜಾಧವ್ ( ಈಜು).

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಾಕಿ ತಂಡದ ಕೋಚ್ ಈಗ ಬೀದಿಬದಿ ವ್ಯಾಪಾರಿ