Select Your Language

Notifications

webdunia
webdunia
webdunia
webdunia

ರಿಯೊ ವಾಲ್ಟ್ ಫೈನಲ್‌ನಲ್ಲಿ ದೀಪಾ ನಾಲ್ಕನೆ ಸ್ಥಾನ: ಸ್ವಲ್ಪದರಲ್ಲಿ ಕೈತಪ್ಪಿದ ಕಂಚಿನ ಪದಕ

ರಿಯೊ ವಾಲ್ಟ್ ಫೈನಲ್‌ನಲ್ಲಿ ದೀಪಾ ನಾಲ್ಕನೆ ಸ್ಥಾನ: ಸ್ವಲ್ಪದರಲ್ಲಿ ಕೈತಪ್ಪಿದ ಕಂಚಿನ ಪದಕ
ರಿಯೊ ಡಿ ಜನೈರೊ , ಸೋಮವಾರ, 15 ಆಗಸ್ಟ್ 2016 (16:19 IST)
ತ್ರಿಪುರಾ ಮೂಲದ ದೀಪಾ ಕರ್ಮಾಕರ್ ಅವರು ರಿಯೊ ಒಲಿಂಪಿಕ್ಸ್‌ನ ಮಹಿಳೆಯ ವಾಲ್ಟ್ ಫೈನಲ್‌ನಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದಾರೆ. ಅವರು ಶ್ರೇಷ್ಟ ಪ್ರದರ್ಶನ ನೀಡಿದರೂ ನಾಲ್ಕನೆಯ ಸ್ಥಾನ ಪಡೆದು ಪದಕ ಕೈತಪ್ಪಿಹೋಗಿದ್ದರಿಂದ ತೀವ್ರ ನಿರಾಶರಾದರು.

23ವರ್ಷ ವಯಸ್ಸಿನ ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದು, ಸರಾಸರಿ 15. 066 ಪಾಯಿಂಟ್ ಸ್ಕೋರ್ ಮಾಡಿದ್ದರು. ಕಂಚಿನ ಪದಕ ವಿಜೇತೆ ಸ್ವಿಜರ್‌ಲೆಂಡ್ ಗಿಲಿಯಾ ಸ್ಟೇನ್‌ಗ್ರಬರ್ (15. 216 ಅವರಿಗಿಂತ 0.15 ಪಾಯಿಂಟ್ ಕಡಿಮೆಯಾಗಿ ಪದಕವಂಚಿತೆಯಾದರು.
 
 ನಾನು ನನಗೆ ಸಾಧ್ಯವಾದಷ್ಟು ಶ್ರೇಷ್ಟ ಪ್ರದರ್ಶನ ನೀಡಿದ್ದೇನೆ. ನಾನು ನಾಲ್ಕನೆಯ ಸ್ಥಾನ ಬಂದಿದ್ದು ತುಂಬಾ ದುಃಖವಾಗಿದೆ. ಐದನೇ ಅಥವಾ 6 ನೇ ಸ್ಥಾನಕ್ಕೆ ಬಂದಿದ್ದರೆ ನೋವಾಗುತ್ತಿರಲಿಲ್ಲ ಎಂದು ದೀಪಾ ಪ್ರತಿಕ್ರಿಯಿಸಿದ್ದಾರೆ.
 ಅಮೆರಿಕದ ಸೈಮೋನ್ ಬೈಲ್ಸ್ ಅವರಿಗೆ ಚಿನ್ನದ ಪದಕ ದಕ್ಕಿದ್ದು, 15. 966 ಪಾಯಿಂಟ್ ಗಳಿಸಿದ್ದಾರೆ. ಟೀಂ ಈವೆಂಟ್‌ನಲ್ಲಿ ಈಗಾಗಲೇ ಅವರು ಎರಡು ಚಿನ್ನವನ್ನು ಗೆದ್ದಿದ್ದಾರೆ.
 
ಹಾಲಿನ ವಾಲ್ಟ್ ವಿಶ್ವ ಚಾಂಪಿಯನ್ ರಷ್ಯಾದ ಮಾರಿಯಾ ಪಾಸೆಕಾ 15. 243 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. 
 ಫೈನಲ್ಸ್‌ನಲ್ಲಿ 6 ನೇ ಸ್ಪರ್ಧಿಯಾದ ತ್ರಿಪುರಾ ಬಾಲಕಿ ತನ್ನ ಮೊದಲ ಪ್ರಯತ್ನದಲ್ಲಿ ಸುಕಾಹರಾ ಪ್ರಯತ್ನಿಸಿ ಅದರಲ್ಲಿ 14.866 ಪಾಯಿಂಟ್ ಗಳಿಸಿದರು. ಪ್ರುಡುನೋವಾದಲ್ಲಿ ದೀಪಾ ಎಲ್ಲಾ ಪ್ರಯತ್ನ ಮಾಡಿದರೂ ಲ್ಯಾಂಡಿಂಗ್ ಪರಿಪೂರ್ಣತೆ ಇಲ್ಲದ ನೆಲವನ್ನು ಸ್ವಲ್ಪ ಮುಟ್ಟಿದ್ದರಿಂದ ಪಾಯಿಂಟ್ ಕಳೆದುಕೊಂಡರು.

ಪ್ರುಡುನೋವಾಗೆ ಅವರು 15. 266 ಸ್ಕೋರ್ ಮಾಡಿದರು. ಎಕ್ಸಿಕ್ಯೂಷನ್‌ಗೆ 8.266 ಮತ್ತು ಡಿಫಿಕಲ್ಟಿ ಮಟ್ಟಕ್ಕೆ 7 ಪಾಯಿಂಟ್ ಸ್ಕೋರ್ ಮಾಡಿದ್ದಾರೆ. ಇದರ ಸರಾಸರಿ ಅವರಿಗೆ 15. 0666 ಪಾಯಿಂಟ್ ತಂದುಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಯಾಸಿರ್ ಶಾಹ್ ಮನೋಜ್ಞ ಬೌಲಿಂಗ್: ಇಂಗ್ಲೆಂಡ್ ಸೋಲಿಸಿದ ಪಾಕ್, ಸರಣಿ 2-2ರಿಂದ ಡ್ರಾ