Publish Date: Tue, 14 Jul 2026 (21:06 IST)
Updated Date: Tue, 14 Jul 2026 (21:10 IST)
ಲಂಡನ್: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಆರಂಭಿಕ ಏಕದಿನ ಪಂದ್ಯಕ್ಕೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಕ್ಷಿಯಾಗಿದ್ದಾರೆ.
ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದ ಸುಮಾರು ಆರು ವರ್ಷಗಳ ನಂತರವೂ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಅವರು ಅಭಿಮಾನಿಗಳ ಅಪಾರ ಗಮನ ಸೆಳೆಯುತ್ತಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಪಂದ್ಯದ ವೇಳೆ ಅವರ ವಿಡಿಯೊ ತುಣುಕು ಅವರ ಮುಗ್ಧ ಹೃದಯಕ್ಕೆ ಸಾಕ್ಷಿಯಾಗಿದೆ.
45 ವರ್ಷದ ಧೋನಿ ಅವರ ಕಡೆಗೆ ಕ್ಯಾಮೆರಾಗಳು ತಿರುಗಿದಾಗ ಸ್ಟ್ಯಾಂಡ್‌ಗಳಲ್ಲಿ ಕಾಣಿಸಿಕೊಂಡರು. ಅವರನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಈ ವೇಳೆ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಎಲ್ಲರ ಮನಗೆದ್ದಿದೆ.
ಧೋನಿಯ ಹತ್ತಿರ ಕುಳಿತಿದ್ದ ಮಗುವೊಂದು ಪಾಪ್‌ಕಾರ್ನ್ ತಿನ್ನುತ್ತಾ, ನಂತರ ಧೋನಿ ಅವರಿಗೆ ನೀಡಿತು. ಸಂತೋಷದಿಂದ ಅದನ್ನು ಸ್ವೀಕರಿಸಿ ತಿಂದು ಖುಷಿ ಪಟ್ಟರು. ಕೆಲವು ಕ್ಷಣಗಳ ನಂತರ ಆ ಮಗು ಮತ್ತೊಮ್ಮೆ ಪಾಪ್‌ಕಾರ್ನ್ ನೀಡಲು ಮುಂದಾಗಿದೆ. ಆದರೆ ಧೋನಿ ನಯವಾಗಿ ನಿರಾಕರಿಸಿದ್ದಾರೆ. ತನಗೆ ಈಗಾಗಲೇ ಸಾಕಾಗಿದೆ ಎಂಬಂತೆ ಧೋನಿ ಸನ್ನೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ