Publish Date: Thu, 09 Jul 2026 (10:29 IST)
Updated Date: Thu, 09 Jul 2026 (10:32 IST)
ಮಗಳ ಮದುವೆ ದಿನ ವರನಿಗೆ ದಕ್ಷಿಣೆ ಕೊಡಲು ತನ್ನ ಆಸ್ತಿ ಮಾರಿ ದುಡ್ಡು ತಂದು ಕೈಗಿತ್ತಾಗ ಅಳಿಯನ ರಿಯಾಕ್ಷನ್ ಹೇಗಿತ್ತು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ವಿಡಿಯೋ.
ಮಗಳ ಮದುವೆ ಎಂದರೆ ಯಾವುದೇ ತಂದೆಗೂ ಅದೊಂದು ಯುದ್ಧದಂತೆ. ಸಾಕಷ್ಟು ಖರ್ಚು ವೆಚ್ಚಗಳಿರುತ್ತವೆ. ಖರ್ಚು ಸರಿದೂಗಿಸುವಷ್ಟರಲ್ಲಿ ತಂದೆ ಹೈರಾಣಾಗಿರುತ್ತಾರೆ. ಇಲ್ಲೊಂದು ಮದುವೆಯಲ್ಲಿ ತಂದೆಯ ಪರಿಸ್ಥಿತಿ ಎಲ್ಲರ ಕಣ್ಣಂಚು ಒದ್ದೆ ಮಾಡುವಂತಿದೆ.
ವರಪೂಜೆ ಸಂದರ್ಭದಲ್ಲಿ ಅಳಿಯನಿಗೆ ಮಾವ ಆಸ್ತಿ ಮಾರಿದ ಹಣ ನೀಡಲು ಮುಂದಾಗುತ್ತಾನೆ. ಆದರೆ ಈ ವೇಳೆ ಅಳಿಯ ಬೇಡ, ನನಗೆ ನಿಮ್ಮ ಮಗಳನ್ನು ಕೊಟ್ಟರೆ ಸಾಕು ಎಂದು ಕೈ ಅಲ್ಲಾಡಿಸುತ್ತಾನೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೆಲವರು ಇದು ಕ್ಯಾಮರಾ ಎದುರು ಮಾತ್ರ ಮಾಡ್ತಿರುವ ನಾಟಕ ಎಂದು ವ್ಯಂಗ್ಯ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ