Select Your Language

Notifications

webdunia
webdunia
webdunia
webdunia

ಮನೆ ಹೊರಗೇ ಗಂಟೆಗಟ್ಟಲೆ ಕಾದು ನಿಂತಿದ್ದ ಅಮ್ಮ, ಮನೆ ಒಳಗಿದ್ದ ಮಗಳು ಪ್ರಿಯಕರನ ಜೊತೆ... Video

Viral video mother-daughter
Photo Credit: X
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಇಂದಿನ ಯುವಜನತೆಯ ಮೊಬೈಲ್ ವ್ಯಸನ ಹಾಗೂ ಹೆತ್ತವರ ಮೇಲಿನ ನಿರ್ಲಕ್ಷ್ಯದ ಕುರಿತು ಭಾರಿ ಚರ್ಚೆಗೆ ಕಾರಣವಾಗಿದೆ.

ಮನೆಯ ಹೊರಗಡೆ ತಾಯಿ ಗಂಟೆಗಟ್ಟಲೆ ನಿಂತು ಬಾಗಿಲು ತಟ್ಟುತ್ತಿದ್ದರೂ, ಒಳಗೆ ಮಗಳು ಪ್ರೇಮಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ಬಾಗಿಲು ತೆರೆಯದೇ ನಿರ್ಲಕ್ಷಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ವಿಡಿಯೋದಲ್ಲಿರುವ ಮಾಹಿತಿಯಂತೆ, ತಾಯಿ ಮಾರುಕಟ್ಟೆಯಿಂದ ಸಾಮಗ್ರಿಗಳನ್ನು ತರಲು ಹೊರಗೆ ಹೋಗಿ ವಾಪಸ್ ಮನೆಗೆ ಬಂದಿದ್ದಾರೆ. ತಾಯಿ ಮನೆಗೆ ಬಂದು ಸುಮಾರು ಒಂದು ಗಂಟೆಯಿಂದ ಬಾಗಿಲು ತಟ್ಟುತ್ತಿದ್ದರೂ, ಒಳಗಿದ್ದ ಮಗಳು ತಕ್ಷಣವೇ ಬಾಗಿಲು ತೆರೆದಿಲ್ಲ. ಆಕೆ ತನ್ನ ಪ್ರೇಮಿಯೊಂದಿಗೆ ಸುದೀರ್ಘವಾಗಿ ಫೋನ್‌ನಲ್ಲಿ ಮಾತನಾಡುತ್ತಾ ಬ್ಯುಸಿಯಾಗಿದ್ದಳು ಎನ್ನಲಾಗಿದೆ.

ಕೊನೆಗೆ ಬಾಗಿಲು ತೆರೆದಾಗ, ಇಷ್ಟೊಂದು ತಡವಾಗಿ ಬಾಗಿಲು ತೆರೆದಿದ್ದಕ್ಕೆ ತಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಗಳು, ತಾನು "ಓದಿನಲ್ಲಿ ನಿರತಳಾಗಿದ್ದೆ" ಎಂದು ಸುಳ್ಳು ನೆಪ ಹೇಳಿದ್ದಾಳೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಎರಡು ಭಾಗವಾಗಿ ಭಾರಿ ಚರ್ಚೆ ನಡೆಸುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್‌ಗಳಿಗೆ ಎಷ್ಟು ದಾಸರಾಗಿದ್ದಾರೆಂದರೆ, ಕಣ್ಣೆದುರಿನ ಸಂಬಂಧಗಳು ಹಾಗೂ ಹೆತ್ತವರ ಕಷ್ಟವೂ ಅವರಿಗೆ ಕಾಣಿಸುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಟುಂಬದೊಳಗೆ ಮಕ್ಕಳು ಮತ್ತು ಹೆತ್ತವರ ನಡುವೆ ಗೌರವ ಹಾಗೂ ಪಾರದರ್ಶಕತೆ ಕಡಿಮೆಯಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ.

pic.twitter.com/qbExdnwKue

 

— Mohd. Arif (@MohdArif396) August 5, 2026

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ