Publish Date: Wed, 02 Sep 2026 (11:16 IST)
Updated Date: Wed, 02 Sep 2026 (11:19 IST)
ಕುಟುಂಬಕ್ಕೆ ಉತ್ತಮ ಭವಿಷ್ಯ ರೂಪಿಸಬೇಕು, ಹೆಂಡತಿ-ಮಕ್ಕಳು ಯಾವುದೇ ಕೊರತೆಯಿಲ್ಲದೆ ಸುಖವಾಗಿರಬೇಕು ಎಂದು ಹಗಲಿರುಳು ಕಷ್ಟಪಟ್ಟು ದುಡಿಯಲು ವಿದೇಶಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಘೋರ ನಂಬಿಕೆದ್ರೋಹ. ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಸತ್ಯ ತಿಳಿಯಲು ದಿಢೀರನೆ ಮನೆಗೆ ಬಂದ ಪತಿಗೆ ಕಂಡಿದ್ದು ತನ್ನದೇ ಸ್ವಂತ ರಕ್ತಸಂಬಂಧಿ ಹಾಗೂ ಹೆಂಡತಿಯ ಅಕ್ರಮ ಸಂಬಂಧದ ಕರಾಳ ರೂಪ!
ಆಗಿದ್ದೇನು?
ಸದರಿ ವ್ಯಕ್ತಿ ವಿದೇಶದಲ್ಲಿ ನೆಲೆಸಿ, ತಾನು ಗಳಿಸಿದ ಹಣವನ್ನೆಲ್ಲಾ ಊರಿನಲ್ಲಿದ್ದ ಪತ್ನಿ ಮತ್ತು ಮಕ್ಕಳಿಗೇ ಕಳುಹಿಸುತ್ತಿದ್ದ. ಆದರೆ, ಇತ್ತೀಚೆಗೆ ಆತನಿಗೆ ಪತ್ನಿ ತನ್ನಿಂದ ಏನೋ ಮುಚ್ಚಿಡುತ್ತಿದ್ದಾಳೆ ಎಂಬ ಅನುಮಾನ ಬಲವಾಗಿ ಕಾಡತೊಡಗಿತ್ತು. ಹೀಗಾಗಿ ಯಾರಿಗೂ ತಿಳಿಸದೆ, ದಿಢೀರನೆ ವಿದೇಶದಿಂದ ಊರಿಗೆ ಮರಳಲು ನಿರ್ಧರಿಸಿದ. ಆತ ನೇರವಾಗಿ ಮನೆಗೆ ಹೋಗದೆ, ತನ್ನಿಬ್ಬರು ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಮನೆಗೆ ತೆರಳಿದ್ದ.
ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಜೋಡಿ:
ಮನೆಯ ಬಾಗಿಲು ತೆರೆದು ಒಳಗೆ ಹೋದ ಪತಿಗೆ ಆಘಾತ ಕಾದಿತ್ತು. ಪತ್ನಿ ತನ್ನದೇ ಸ್ವಂತ ಭಾವಮೈದನ ಜೊತೆ ರಹಸ್ಯವಾಗಿ ಕಾಲ ಕಳೆಯುತ್ತಿರುವುದು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದೆ. ತಾನು ಕಣ್ಣಾರೆ ಕಂಡ ದೃಶ್ಯದಿಂದ ಕಂಗಾಲಾದರೂ, ವಿವೇಚನೆ ಕಳೆದುಕೊಳ್ಳದ ಆ ವ್ಯಕ್ತಿ ಸ್ಥಳದಲ್ಲೇ ಆಕೆಯ ಮರ್ಯಾದೆ ಹರಾಜು ಹಾಕಿದ್ದಾನೆ.
ಪೋಲಿಸ್ ಠಾಣೆ ಮೆಟ್ಟಿಲೇರಿದ ಪ್ರಕರಣ:
ಆಕ್ರೋಶಗೊಂಡ ಪತಿ, ಪತ್ನಿ ಹಾಗೂ ಆಕೆಯ ಪ್ರಿಯಕರ (ಭಾವಮೈದ) ಇಬ್ಬರನ್ನೂ ಅದೇ ಸ್ಥಿತಿಯಲ್ಲೇ ಕತ್ತಪಟ್ಟಿ ಹಿಡಿದು ಎಳೆದುಕೊಂಡು ಹೋಗಿ ನೇರವಾಗಿ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾನೆ. ಠಾಣೆಯಲ್ಲಿದ್ದ ಎಲ್ಲರ ಎದುರೂ ಅವರಿಬ್ಬರ ದುಷ್ಕೃತ್ಯವನ್ನು ಬಯಲುಗೊಳಿಸಿ, ಮಾನ ಹರಾಜು ಹಾಕಿದ್ದಾನೆ.
ತನ್ನ ಕಷ್ಟದ ದುಡಿಮೆಯ ಪ್ರತಿಯೊಂದು ಪೈಸೆಯನ್ನು ಅನುಭವಿಸಿ, ತನಗೆ ಬೆನ್ನಿಗೆ ಚೂರಿ ಹಾಕಿದ ಪತ್ನಿಗೆ ತಕ್ಕ ಪಾಠ ಕಲಿಸಿದ ಆ ವ್ಯಕ್ತಿ, ತಕ್ಷಣವೇ ವಿಚ್ಛೇದನ (Divorce) ನೀಡಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಆಸ್ತಿ ಮತ್ತು ಗಳಿಕೆಯಲ್ಲಿ ಆಕೆಗೆ ಒಂದು ಪೈಸೆಯನ್ನೂ ನೀಡದೆ ಖಾಲಿ ಕೈಯಲ್ಲಿ ಮನೆಯಿಂದ ಆಚೆಗೆ ಅಟ್ಟಿ ತನ್ನ ಸ್ವಾಭಿಮಾನವನ್ನು ಮೆರೆದಿದ್ದಾನೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ