Publish Date: Wed, 02 Sep 2026 (10:20 IST)
Updated Date: Wed, 02 Sep 2026 (10:57 IST)
ಸಮಾಜದಲ್ಲಿ ಪುರುಷನ ಬದುಕನ್ನು ದೂರದಿಂದ ನೋಡುವವರಿಗೆ ಅದು ಕರ್ತವ್ಯ, ಜವಾಬ್ದಾರಿ ಅಥವಾ ಅಧಿಕಾರದ ಸಂಕೇತವಾಗಿ ಕಾಣಿಸಬಹುದು. ಆದರೆ, ಅದರ ಆಳಕ್ಕಿಳಿದು ನೋಡಿದಾಗಷ್ಟೇ ತಿಳಿಯುತ್ತದೆ—ಅಲ್ಲಿ ಹಸಿವಿಗಿಂತ ದೊಡ್ಡದಾದ ಒಂದು ಸ್ವಾಭಿಮಾನದ ಹೋರಾಟವಿರುತ್ತದೆ. ಇತ್ತೀಚೆಗೆ ವೈರಲ್ ಆದ ಒಂದು ಘಟನೆ ಪ್ರತಿಯೊಬ್ಬನ ಮನಸ್ಸನ್ನೂ ಕಲಕುವಂತಿದೆ.
ದೂರದ ಊರಿನಿಂದ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಬಂದಿದ್ದ ಆ ಯುವಕ, ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿ ಹೊಟ್ಟೆ ಹಸಿದಾಗ ಊಟ ಮಾಡಲು ಕುಳಿತಿದ್ದ. ಸರಿ ಅದೇ ಸಮಯಕ್ಕೆ ಯಜಮಾನ (ಓನರ್) ತನ್ನತ್ತ ಬರುವುದನ್ನು ಕಂಡು, ಆ ಹುಡುಗ ಒಮ್ಮೆಲೇ ಗಾಬರಿಯಾಗಿ ತನ್ನ ಬಸ್ಸಾಪೆಟ್ಟಿಗೆಯನ್ನು ಬಚ್ಚಿಡಲು ಯತ್ನಿಸಿದ. ಯಜಮಾನ ಬಂದು "ಏನು ತಿನ್ನುತ್ತಿದ್ದೀಯಾ, ತೋರಿಸು?" ಎಂದು ಕೇಳಿ ತಟ್ಟೆ ತೆಗೆಸಿದಾಗ ಅಲ್ಲಿದ್ದದ್ದು ಕೇವಲ ಒಂದು ಒಣ ರೊಟ್ಟಿ ಮತ್ತು ಹಸಿ ಈರುಳ್ಳಿ ಮಾತ್ರ!
ಆ ಯುವಕ ತನ್ನ ಊಟವನ್ನು ಬಚ್ಚಿಟ್ಟಿದ್ದು ಯಜಮಾನನಿಗೆ ಹೆದರಿಯಲ್ಲ, ಬದಲಿಗೆ ತನ್ನ ಬಡತನ, ತನ್ನ ಅಸಹಾಯಕತೆ ಇತರರ ಮುಂದೆ ಪ್ರದರ್ಶನವಾಗಬಾರದು ಎಂಬ ಸಂಕೋಚದಿಂದ! ಸಂಕೋಚದ ಮುದ್ದೆಯಾಗಿದ್ದ ಈ ಯುವಕನ ವಿಡಿಯೋ ನೋಡಿ ನೆಟ್ಟಿಗರೂ ಭಾವುಕರಾಗಿದ್ದಾರೆ. ತನ್ನ ಹಸಿವನ್ನು ಬಚ್ಚಿಟ್ಟು, ಕುಟುಂಬದ ಹಸಿವನ್ನು ನೀಗಿಸಲು ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ದುಡಿಯುವ ಕೈಗಳಿಗೂ, ಆ ಮೌನ ಹೋರಾಟಗಾರರಿಗೂ ನಮನಗಳು. ಗಂಡಸಿನ ಬದುಕು ಸುಲಭವಲ್ಲ, ಆದರೆ ಆ ಅಸಹಾಯಕತೆಯ ನಡುವೆಯೂ ಸಾಗುವ ಅವನ ಸ್ವಾಭಿಮಾನದ ಪಯಣ ನಿಜಕ್ಕೂ ಗೌರವಾರ್ಹ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ