ಚುನಾವಣೆಯಲ್ಲಿ ಜನತೆಯಿಂದ ತಿರಸ್ಕ್ರತರಾದವರು ಸರಕಾರವನ್ನೇ ಆಳುತ್ತಿದ್ದಾರೆ ಎಂದು ಅಮಾನತ್ತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್, ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿಗೆ ಟಾಂಗ್ ನೀಡಿದ್ದಾರೆ.
ಚುನಾವಣೆಯಲ್ಲಿ ಜನತೆಯಿಂದ ತಿರಸ್ಕ್ರತರಾದವರಿಗೆ ಪ್ರಮುಖ ಖಾತೆ ನೀಡಿ ಸಚಿವರನ್ನಾಗಿ ಮಾಡಿದ್ದಲ್ಲದೇ ಅವರೇ ಸರಕಾರ ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜನತೆಯಿಂದ ತಿರಸ್ಕ್ರತರಾದಂತಹ ಕೆಲವರು ಪಕ್ಷ ಮತ್ತು ಸರಕಾರದಲ್ಲಿದ್ದಾರೆ. ಅಂತಹ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡಿದ್ದಲ್ಲದೇ ಸರಕಾರ ಮತ್ತು ಪಕ್ಷದಲ್ಲಿ ಅವರೇ ಎಲ್ಲಾ ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಕಳೆದ 300 ದಿನಗಳಿಂದ ಬಿಜೆಪಿ ಹೈಕಮಾಂಡ್ ನನ್ನನ್ನು ಅಮಾನತ್ತಿನಲ್ಲಿರಿಸಿದೆ. ಆದಾಗ್ಯೂ ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಪಕ್ಷ ನನ್ನ ಅಮಾನತ್ತು ವಾಪಸ್ ಪಡೆದುಕೊಳ್ಳಬೇಕು. ಇಲ್ಲವೇ ಉಚ್ಚಾಟಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಡಿಡಿಸಿಎನಲ್ಲಿ ಚಕ್ರವರ್ತಿಯಾಗಿ ಮೆರೆಯುತ್ತಿದ್ದ ಸಚಿವ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ವಿಷಯವನ್ನು ಎತ್ತಿದ್ದರಿಂದ ನನ್ನನ್ನು ಅಮಾನತ್ತುಗೊಳಿಸಲಾಯಿತು ಎಂದು ತಿರುಗೇಟು ನೀಡಿದರು.
ಇದೀಗ ಸುಪ್ರೀಂಕೋರ್ಟ್ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಹಣ ಬಿಡುಗಡೆ ಮಾಡದಂತೆ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಅಮಾನತ್ತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ