Publish Date: Wed, 08 Jul 2026 (15:43 IST)
Updated Date: Wed, 08 Jul 2026 (15:54 IST)
ಕೋಲ್ಕತ್ತಾದ ಬರುಯಿಪುರ ಉಪನಗರದಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪ್ರಭಾಸ್ ಮೊಂಡಲ್ ಅಂತಮ ವಿಧಿವಿಧಾನದಲ್ಲಿ ಭಾಗಿಯಾಗಲ್ಲ ಎಂದು ಆತನ ತಾಯಿ ಸಂಧ್ಯಾ ಮೊಂಡಲ್ ಹೇಳಿದ್ದಾರೆ.
ನಮ್ಮ ಮನೆಯಿಂದ ಆತನಿಗೆ ಅಂತಿಮ ವಿದಾಯ ಸಿಗುವುದಿಲ್ಲ. ಯಾಕೆಂದರೆ ಆತ ಯಾವುದೇ ಒಳ್ಳೆಯ ಕೆಲಸ ಮಾಡಿ ಮೃತಪಟ್ಟಿಲ್ಲ . ಹೀಗಾಗಿ ಆತನ ಮೃತದೇಹವು ಕೊನೆಯ ಬಾರಿಗೂ ನಮ್ಮ ಮನೆಗೆ ಬರುವುದನ್ನು ನಾವು ಬಯಸುತ್ತಿಲ್ಲ ಎಂದು ಸಂಧ್ಯಾ ಮೊಂಡಾಲ್ ಹೇಳಿದರು.
"ನನ್ನ ಮಗ ಮಾಡಿದ ಕೆಲಸಕ್ಕೆ ಶಿಕ್ಷೆ ಅನುಭವಿಸಿದ್ದಾನೆ. ನಾನು ಆತನ ಮೃತದೇಹವನ್ನು ಸ್ವೀಕರಿಸುವುದಿಲ್ಲ. ಆತನ ಮೃತದೇಹವನ್ನು ನಮ್ಮ ಮನೆಗೆ ತರುವುದಿಲ್ಲ. ಆತ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತ ತಪ್ಪು ಮಾಡಿದ್ದ ಮತ್ತು ಅದಕ್ಕೆ ಶಿಕ್ಷೆ ಪಡೆದಿದ್ದಾನೆ. ಅವನನ್ನು ಕೊಲ್ಲಿರಿ ಅಥವಾ ನಿಮಗೆ ಬೇಕಾದುದನ್ನು ಮಾಡಿ; ನನಗೆ ಯಾವುದೇ ಅಭ್ಯಂತರವಿಲ್ಲ," ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ