Webdunia - Bharat's app for daily news and videos

Install App

ಮನೆಯೊಳಗೆ ಗಂಗಾಜಲ ಬಂದಿದ್ದು ನಿಮ್ಮ ಭಾಗ್ಯ: ಪ್ರವಾಹ ಪೀಡಿತರಿಗೆ ಲಾಲು

Webdunia
ಬುಧವಾರ, 24 ಆಗಸ್ಟ್ 2016 (12:47 IST)
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೋಮವಾರ ಪ್ರವಾಹ ಪೀಡಿತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸದಾ ವಿಲಕ್ಷಣ ಹೇಳಿಕೆ ನೀಡುವುದರಿಂದಲೇ ಸುದ್ದಿಯಾಗುವ ಅವರು ಈ ಸಂದರ್ಭದಲ್ಲಿ ಸಹ ಅಸಂವೇದನೀಯ ಹೇಳಿಕೆ ನೀಡುವುದರ ಮೂಲಕಇರಿಸುಮುರಿಸಿಗೆ ಒಳಗಾಗಿದ್ದಾರೆ. 
 
ಎಲ್ಲರೂ ಮನೆಯೊಳಗೆ ಗಂಗಾಜಲವನ್ನು ಪಡೆಯಲಾರರು. ರಾಜ್ಯದಲ್ಲಿ ಪ್ರವಾಹದಿಂದ ಪೀಡಿತರಾಗಿರುವವರು ಅದೃಷ್ಟವಂತರು. ಹೀಗಾಗಿ ಗಂಗಾಜಲ ತಾನಾಗಿಯೇ ಅವರ ಮನೆಯೊಳಗೆ ಬಂದಿದೆ ಎಂದು ಅವರು ಅಸಂಬದ್ಧ ಹೇಳಿಕೆ ನೀಡಿದ್ದಾರೆ.
 
ಬಿಹಾರದಲ್ಲಾದ ವ್ಯಾಪಕ ಮಳೆಯಿಂದಾಗಿ ಗಂಗಾ ಮತ್ತು ಇತರ ಪ್ರಮುಖ ನದಿಗಳಲ್ಲಿ ಪ್ರವಾಹ ಬಂದು ಸಾವಿರಾರು ಜನರು ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಈ ನೈಸರ್ಗಿಕ ವಿಪತ್ತಿನ ಪರಿಣಾಮ 14 ಜನರು ಸಾವನ್ನಪ್ಪಿದ್ದಾರೆ. ಅದರಲ್ಲೂ ಭೋಜ್ಪುರ್ ಜಿಲ್ಲೆಯೊಂದರಲ್ಲಿಯೇ 9 ಮಂದಿ ಅಸುನೀಗಿದ್ದಾರೆ. 
 
ಸರ್ಕಾರ ತಮಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸುತ್ತಿರುವ ಪ್ರವಾಹ ಪೀಡಿತರನ್ನು ಭೇಟಿಯಾದ ಲಾಲು, ಗಂಗಾಜಲ ಎಲ್ಲರ ಮನೆ ಒಳಗೆ ಬರುವುದಿಲ್ಲ. ನೀವು ಅದೃಷ್ಟವಂತರು. ತಾಯಿ ಗಂಗೆ ನಿಮ್ಮನ್ನು ಕಾಪಾಡುತ್ತಾಳೆ ಎಂದಿದ್ದಾರೆ. 
 
ಏತನ್ಮಧ್ಯೆ ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ರಾಜ್ಯದ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor ಟಾರ್ಗೆಟ್ ಏನಾಗಿತ್ತು ಎಂದು ಬಹಿರಂಗಪಡಿಸಿದ ಪ್ರಧಾನಿ ಮೋದಿ

Karnataka: ಭಾರತೀಯ ಸೇನೆಗಾಗಿ ಬಿಜೆಪಿಯಿಂದ ಪಕ್ಷಾತೀತ ತಿರಂಗಾ ಯಾತ್ರೆ

Nuclear leak: ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಂತಿ, ತಲೆನೋವು: ಎಲ್ಲಾ ಭಾರತೀಯ ಸೇನೆ ಇಫೆಕ್ಟ್

Operation Kellar: ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರು ಫಿನಿಶ್

PM Modi: ಆದಂ ಪುರ ವಾಯುನೆಲೆಗೆ ಮೋದಿ ಸರ್ಪ್ರೈಸ್ ಭೇಟಿ, ಸೆಲ್ಫೀಗೆ ಪೋಸ್

ಮುಂದಿನ ಸುದ್ದಿ
Show comments