Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ‘ಲೋಫರ್’ ನಂತೆ ಕಣ್ಸನ್ನೆ ಮಾಡಿದರು: ಹೀಗೆ ಹೇಳಿದವರಾರು ಗೊತ್ತೇ?!

ರಾಹುಲ್ ಗಾಂಧಿ ‘ಲೋಫರ್’ ನಂತೆ ಕಣ್ಸನ್ನೆ ಮಾಡಿದರು: ಹೀಗೆ ಹೇಳಿದವರಾರು ಗೊತ್ತೇ?!
ಪಣಜಿ , ಮಂಗಳವಾರ, 24 ಜುಲೈ 2018 (09:57 IST)
ಪಣಜಿ: ಮೊನ್ನೆ ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಆಸನದಿಂದ ಎದ್ದು ಬಂದು ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ನಂತರ ತಮ್ಮ ಪಕ್ಷದವರ ಕಡೆಗೆ ನೋಡಿ ಕಣ್ಸನ್ನೆ ಮಾಡಿದ ಘಟನೆ ಬಗ್ಗೆ ಗೋವಾ ಬಿಜೆಪಿ ವಕ್ತಾರ ವಿವಾದಿತ ಹೇಳಿಕೆ ನೀಡಿದ್ದಾರೆ.
 

ರಾಹುಲ್ ಪ್ರಧಾನಿಯನ್ನು  ತಬ್ಬಿಕೊಂಡು ನಂತರ ಲೋಫರ್ ನಂತೆ ಕಣ್ಣು ಮಿಟುಕಿಸಿದರು ಎಂದು ಗೋವಾ ಬಿಜೆಪಿ ವಕ್ತಾರ ದತ್ತಪ್ರಸಾದ್ ನಾಯಕ್ ಹೇಳಿಕೆ ನೀಡಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ಕಾಂಗ್ರೆಸ್ ನಾಯಕ ಗಿರೀಶ್ ಛೋಡ್ನಾಕರ್ ‘ಕೈಗೊಂಬೆ’ ಎಂದ ಬೆನ್ನಲ್ಲೇ ಬಿಜೆಪಿ ವಕ್ತಾರರು ರಾಹುಲ್ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದಾರೆ.

‘ಗೋವಾ ಕಾಂಗ್ರೆಸ್ 2019 ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಗೆ ಸೂಕ್ತ ನಾಯಕನನ್ನು ಹುಡುಕಲು ಸಹಾಯ ಮಾಡಬೇಕು. ರಾಹುಲ್ ಗಾಂಧಿ ಪ್ರಚಾರಕ್ಕಾಗಿ ಕಣ್ಣು ಹೊಡೆಯುವಂತಹ ಚೀಪ್ ಗಿಮಿಕ್ ಮಾಡುತ್ತಿದ್ದಾರೆ’ ಎಂದು ದತ್ತಪ್ರಸಾದ್ ಟೀಕಿಸಿದ್ದಾರೆ. ಅವರ ಈ ಹೇಳಿಕೆ ವಿವಾದವಾಗುವ ಲಕ್ಷಣವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೀರೂರು ಮಠದ ಬಾವಿಯಲ್ಲಿ ಅಡಗಿತ್ತಾ ಸುಳಿವು?!