Select Your Language

Notifications

webdunia
webdunia
webdunia
webdunia

ಈ ನಾಟಕವನ್ನು ಕೊನೆಗೊಳಿಸಿ: ಮೃತ ಪೂರಣ್ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ

Congress Leader Rahul Gandhi

Sampriya

ನವದೆಹಲಿ , ಮಂಗಳವಾರ, 14 ಅಕ್ಟೋಬರ್ 2025 (15:38 IST)
Photo Credit X
ನವದೆಹಲಿ: ಹರಿಯಾಣ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಮನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭೇಟಿ ನೀಡಿದರು. 

ರಾಹುಲ್ ಗಾಂಧಿ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮತ್ತು ಕಾಂಗ್ರೆಸ್ ಹಿರಿಯ ನಾಯಕಿ ಕುಮಾರಿ ಸೆಲ್ಜಾ ಅವರೊಂದಿಗೆ ಮೃತ ಅಧಿಕಾರಿಯ ಪತ್ನಿ ಮತ್ತು ಪುತ್ರಿಯರನ್ನು ಭೇಟಿ ಮಾಡಿ ಎಲ್ಲ ಸಹಾಯವನ್ನು ನೀಡುವುದಾಗಿ  ಭರವಸೆ ನೀಡಿದರು.

ನಂತರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ‘ಅನಾಹುತ ಸಂಭವಿಸಿದೆ. ಅವರು ಸರ್ಕಾರಿ ಅಧಿಕಾರಿಯಾಗಿದ್ದು, ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹರಿಯಾಣ ಸಿಎಂ ಖುದ್ದು ಖುದ್ದಾಗಿ ಭರವಸೆ ನೀಡಿದ್ದರು. ಮೂರು ದಿನಗಳ ಹಿಂದೆ ಆ ಬದ್ಧತೆ ಈಡೇರಿಲ್ಲ. ತಂದೆಯನ್ನು ಕಳೆದುಕೊಂಡ ಇಬ್ಬರು ಪುತ್ರಿಯರು ತೀವ್ರ ಒತ್ತಡದಲ್ಲಿದ್ದಾರೆ’ ಎಂದರು.

ಪ್ರಧಾನಿ ಮತ್ತು ಹರಿಯಾಣ ಸಿಎಂಗೆ ಲೋಪಿಯಾಗಿ ನನ್ನ ಸಂದೇಶ ಏನಂದ್ರೆ ಹೆಣ್ಣುಮಕ್ಕಳಿಗೆ ನೀಡಿದ ಬದ್ಧತೆಯನ್ನು ಪೂರೈಸಿ, ಅಂತ್ಯಕ್ರಿಯೆಗೆ ಅವಕಾಶ ಮಾಡಿ, ಈ ನಾಟಕವನ್ನು ಕೊನೆಗೊಳಿಸಿ ಮತ್ತು ಕುಟುಂಬದ ಮೇಲೆ ಒತ್ತಡ ಹೇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದರು. 


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಂತ ಅಪಾಯಕಾರಿ viRuSSನಿಂದ ದೇಶವನ್ನು ಶುದ್ಧೀಕರಿಸಬೇಕಿದೆ: ಸಚಿವ ಪ್ರಿಯಾಂಕ್‌ ಖರ್ಗೆ