Select Your Language

Notifications

webdunia
webdunia
webdunia
webdunia

ರೇಪ್ ಮಾಡಲು ಬಂದ ಮುಸ್ಲಿಂ ಯುವಕನ ಗುಪ್ತಾಂಗ ಕಚಕ್ ಎನಿಸಿದ ದಲಿತ ಯುವತಿ

ದಲಿತ ಯುವತಿ
ಮೀರತ್ , ಸೋಮವಾರ, 24 ಅಕ್ಟೋಬರ್ 2016 (17:15 IST)
ಚಾಕುವಿನಿಂದ ಬೆದರಿಸಿ ಅತ್ಯಾಚಾರವೆಸಗಲು ಬಂದಿದ್ದ ಮುಸ್ಲಿಂ ವ್ಯಕ್ತಿಯ ಗುಪ್ತಾಂಗವನ್ನು ದಲಿತ ಯುವತಿಯೊಬ್ಬಳು ಕಟ್ ಮಾಡಿದ ಹೇಯ ಘಟನೆ ವರದಿಯಾಗಿದೆ.
 
ಇಂಚೋಲಿ ಪ್ರದೇಶದಲ್ಲಿ 17 ವರ್ಷ ವಯಸ್ಸಿನ ದಲಿತ ಯುವತಿಯೊಬ್ಬಳು ಮೂತ್ರ ಮಾಡಲು ಅರಣ್ಯ ಪ್ರದೇಶದೊಳಗೆ ತೆರಳಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
 
23 ವರ್ಷ ವಯಸ್ಸಿನ ರಯೀಸ್ ಎನ್ನುವ ಮುಸ್ಲಿಂ ಸಮುದಾಯದ ಯುವಕ, ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿರುವಾಗ ಆತನ ಕೈಯಿಂದ ಚಾಕು ಕಸಿದುಕೊಂಡ ಯುವತಿ ಆತನ ಗುಪ್ತಾಂಗವನ್ನು ಕಚಕ್ ಎನ್ನಿಸಿದ್ದಾಳೆ. 
 
ಆರೋಪಿ ರಯೀಸ್ ನೋವಿನಿಂದ ಕೂಗುತ್ತಿರುವಾಗ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 
ಆರೋಪಿಯ ಗುಪ್ತಾಂಗವನ್ನು ಕತ್ತರಿಸಿದ ದಲಿತ ಯುವತಿ ಆತನ ಗುಪ್ತಾಂಗ ತೆಗೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ರೇಪ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ.
 
ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜನತೆಯಿಂದ ತಿರಸ್ಕ್ರತರಾದವರು ಕೇಂದ್ರ ಸರಕಾರವನ್ನೇ ಆಳುತ್ತಿದ್ದಾರೆ: ಜೇಟ್ಲಿ ವಿರುದ್ಧ ಕೀರ್ತಿ ಆಜಾದ್ ವ್ಯಂಗ್ಯ