ಉಪರಾಷ್ಟ್ರಪತಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ: ಸ್ಥಳಕ್ಕೆ ‌ದೌಡಾಯಿಸಿದ ಪೊಲೀಸರು

Sampriya
ಶುಕ್ರವಾರ, 17 ಅಕ್ಟೋಬರ್ 2025 (14:11 IST)
Photo Credit X
ಚೆನ್ನೈ: ನೂತನವಾಗಿ ಉಪರಾಷ್ಟ್ರಪತಿಯಾಗಿ ಕಳೆದ ತಿಂಗಳು ಆಯ್ಕೆಯಾದ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. 

ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಸುಳ್ಳು ಬೆದರಿಕೆ ಕರೆ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಧಾಕೃಷ್ಣನ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಬೆದರಿಕೆ ಇಮೇಲ್ ಬಂದಿದೆ. ಕೂಡಲೇ ಅದು ಚೆನ್ನೈನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಅದು ತಲುಪಿದೆ. ಮಾಹಿತಿ ಬಂದ ತಕ್ಷಣ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ (ಬಿಡಿಡಿಎಸ್) ತಜ್ಞರು ಮತ್ತು ಪೊಲೀಸರ ತಂಡ, ಸ್ನಿಫರ್ ಶ್ವಾನದಳದೊಂದಿಗೆ ಉಪರಾಷ್ಟ್ರಪತಿಯವರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದರು.

ಪೊಲೀಸ್ ಪರಿಶೀಲನೆ ವೇಳೆ ಯಾವುದೇ ಅಹಿತಕರ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಇದೊಂದು ಸುಳ್ಳು ಬೆದರಿಕೆ ಕರೆ ಇರಬಹುದು ಎಂದು ಪೊಲೀಸ್ ಶಂಕಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚೆನ್ನೈ ಪೊಲೀಸರಿಗೆ ಇಂತಹ ಹಲವಾರು ಇಮೇಲ್ ಬೆದರಿಕೆಗಳು ಬರುತ್ತಿವೆ. ಬೆದರಿಕೆ ಕರೆಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments