Delhi blast: ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಪೋಟ: ಜನರಲ್ಲಿ ಆತಂಕ video

Krishnaveni K
ಸೋಮವಾರ, 10 ನವೆಂಬರ್ 2025 (19:46 IST)
Photo Credit: X
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಪೋಟಗೊಂಡಿದ್ದು, ಭಾರೀ ಬೆಂಕಿಯಿಂದಾಗಿ ಜನ ಆತಂಕಕ್ಕೀಡಾದ ಘಟನೆ ನಡೆದಿದೆ.

ಕೆಂಪು ಕೋಟೆಯ ಮೆಟ್ರೋ ನಿಲ್ದಾಣ ಗೇಟ್ 1 ರ ಬಳಿ ಸ್ಪೋಟಗೊಂಡಿದೆ. ಒಂದು ಕಾರು ಸ್ಪೋಟಗೊಂಡಿದ್ದು ಅದರ ಬೆಂಕಿಯ ಕೆನ್ನಾಲಗೆಗೆ ಪಕ್ಕದಲ್ಲಿದ್ದ ನಾಲ್ಕೈದು ವಾಹನಗಳಿಗೂ ಬೆಂಕಿ ಹಬ್ಬಿದೆ. ಇದರಿಂದ ಬೆಂಕಿ ಮತ್ತಷ್ಟು ಹಬ್ಬಿದ್ದು ಅಂಗಡಿ ಮುಂಗಟ್ಟುಗಳಿಗೂ ಹಾನಿಯಾಗಿದೆ.

ಸ್ಪೋಟದ ಶಬ್ಧ ಮತ್ತು ಬೆಂಕಿಯ ಕೆನ್ನಾಲಗೆಗೆ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು ಜನ ಆತಂಕದಲ್ಲಿರುವುದು ಗಮನಿಸಬಹುದಾಗಿದೆ.

ವಿಷಯ ತಿಳಿಯುತ್ತಿದ್ದಂತೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ ಘಟನೆಗೆ ನಿಖರ ಕಾರಣವೇನು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಕಾರಣಕ್ಕಾ ಪರಪ್ಪನ ಅಗ್ರಹಾರದಲ್ಲಿದ್ದ ಉಗ್ರನಿಗೆ ಮೊಬೈಲ್ ಕೊಡಲಾಯಿತೇ

ದೆಹಲಿ ಕಾರು ಸ್ಫೋಟ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಚುನಾವಣೆ ವೇಳೆಯೇ ಬಾಂಬ್ ಸ್ಪೋಟ: ಇದಕ್ಕೆ ಕೇಂದ್ರವೇ ಉತ್ತರ ಕೊಡಬೇಕು ಎಂದ ಸಿದ್ದರಾಮಯ್ಯ

ದೆಹಲಿ ಭೀಕರ ಸ್ಫೋಟ, ಇವರ ವೈಫಲ್ಯವೇ ಕಾರಣ ಎಂದ ಬಿಕೆ ಹರಿಪ್ರಸಾದ್‌

ಧರ್ಮಸ್ಥಳ ಸಾಮೂಹಿಕ ವಿವಾಹ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಗಿರೀಶ್ ಮಟ್ಟಣ್ಣನವರ್‌ಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments