Webdunia - Bharat's app for daily news and videos

Install App

ಬಾಚಾ ಪೋಸ್ಟ್ ಮಾರ್ಟಂ ಮಾಡಿದ ವೈದ್ಯ ರಾಜೀನಾಮೆ

Webdunia
ಸೋಮವಾರ, 21 ಮಾರ್ಚ್ 2011 (15:06 IST)
ದೂರಸಂಪರ್ಕ ಖಾತೆ ಮಾಜಿ ಸಚಿವ ರಾಜಾ ಆಪ್ತ, 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐಯಿಂದ ವಿಚಾರಣೆಗೊಳಗಾಗಿದ್ದ ಸಾಧಿಕ್ ಬಾಚಾ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಡಾ. ವಿ. ದೇಕಲ್ ರಾಜೀನಾಮೆ ಸಲ್ಲಿಸಿದ್ದಾರೆ.

39 ರ ಹರೆಯದ ಸಾಧಿಕ್ ಬಾಚಾ ಕಳೇಬರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಳೆದ ಬುಧವಾರ (ಮಾರ್ಚ್ 16) ಚೆನ್ನೈಯ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಈ ಅನಿರೀಕ್ಷಿತ ಸಾವು ಭಾರೀ ನಿಗೂಢತೆಗೂ ಕಾರಣವಾಗಿತ್ತು. ಬಾಚಾರದ್ದು ಆತ್ಮಹತ್ಯೆಯಲ್ಲ ಎಂದು ಸುಬ್ರಮಣ್ಯನ್ ಸ್ವಾಮಿ, ಜಯಲಲಿತಾ ಸೇರಿದಂತೆ ಹಲವು ಮಂದಿ ಶಂಕೆ ವ್ಯಕ್ತಪಡಿಸಿದ್ದರು.

ಚೆನ್ನೈಯನ ರಾಯ್‌ಪೇಟದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಫಾರೆನ್ಸಿಕ್ ವೈದ್ಯಕೀಯ ವಿಭಾಗದ ಸಹಾಯಕ ಪ್ರೊಫೆಸರ್ ಆಗಿದ್ದ ದೇಕಲ್ ರಾಜೀನಾಮೆ ಸಲ್ಲಿಸಿರುವುದು ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೆ, ರಾಜೀನಾಮೆಗೂ ಬಾಚಾ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ರುಜುವಾತು ಪಡಿಸುವ ಯತ್ನಗಳು ನಡೆದಿವೆ.

ಮೊದಲನೆಯದಾಗಿ ಡಾ. ದೇಕಲ್ ಅವರು ಮಾರ್ಚ್ 3ರಂದೇ ರಾಜೀನಾಮೆ ಸಲ್ಲಿಸಿರುವುದು. ಅಂದರೆ ಬಾಚಾ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನಗಳ ಮೊದಲೇ ರಾಜೀನಾಮೆ ನೀಡಿದ್ದರು. ಎರಡನೆಯದಾಗಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದು.

ಈ ಬಗ್ಗೆ ಮಾತನಾಡಿರುವ ದೇಕಲ್, ನನಗೆ ಇನ್ನಷ್ಟೇ ಸೇವೆಯಿಂದ ಬಿಡುಗಡೆ ಪತ್ರ ಸಿಗಬೇಕಿದೆ. ಅದು ಬಂದ ನಂತರ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಿದ್ದಾರೆ.

ಡಿಎಂಕೆ ಕಟ್ಟಾ ಬೆಂಬಲಿಗರೊಬ್ಬರ ಪುತ್ರ ಡಾ. ದೇಕಲ್ ಎಂದು ವರದಿಗಳು ಹೇಳಿವೆ.

ಬಾಚಾ ಶವ ಮರಣೋತ್ತರ ವರದಿ ಬಗ್ಗೆ ಹೆಚ್ಚೇನೂ ವಿವರವನ್ನು ಬಿಟ್ಟು ಕೊಡದ ವೈದ್ಯರು, ಸಾವು ಉಸಿರುಗಟ್ಟಿದ ನಂತರ ಸಂಭವಿಸಿದೆ ಎಂದು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಕುರಿತ ವಿಸ್ತೃತ ವರದಿ ಪ್ರಯೋಗಾಲಯದಿಂದ ಇನ್ನಷ್ಟೇ ಬರಬೇಕಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರನ್ನು ಅಭಿವೃದ್ಧಿಸಿದ್ದೆ ಸಿದ್ದರಾಮಯ್ಯ: ಎಚ್ ಸಿ ಮಹದೇವಪ್ಪ

Viral video: ಕಂಪನಿ ಎಚ್ ಆರ್ ಜೊತೆ ಅಫೇರ್: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಇಒ

ಸಿದ್ದರಾಮಯ್ಯನವರ ಕುರ್ಚಿ ಅಲ್ಲಾಡಿದಾಗ ಸಾಧನಾ ಸಮಾವೇಶ: ವಿಜಯೇಂದ್ರ

ಭಾರತ, ಪಾಕಿಸ್ತಾನ ಕದನದಲ್ಲಿ 5 ಜೆಟ್ ಹೊಡೆದುರುಳಿಸಲಾಗಿತ್ತು: ಟ್ರಂಪ್ ಮತ್ತೆ ಕಿರಿಕ್

ವಿಪಕ್ಷದವರಿಗೂ ದುಡ್ಡು ಸಿಗುತ್ತೆ, ಕಾಯ್ಬೇಕು ಅಂದ್ರೆ ಏನು ಸ್ವಾಮಿ ಅರ್ಥ: ಆರ್ ಅಶೋಕ್

Show comments