Select Your Language

Notifications

webdunia
webdunia
webdunia
webdunia

ನ್ಯಾಯಾಧೀಶರು ಪಕ್ಷಪಾತಿಗಳಲ್ಲ ಅನ್ನೋದು ಸುಳ್ಳು: ಸಾಚಾರ್

ನ್ಯಾಯಮೂರ್ತಿ
ನವದೆಹಲಿ , ಸೋಮವಾರ, 21 ಮಾರ್ಚ್ 2011 (11:45 IST)
ತನ್ನ ಮುಂದೆ ಪ್ರಕರಣವೊಂದು ವಿಚಾರಣೆಗೆ ಬಂದಾಗ ಪ್ರಾಮಾಣಿಕತೆಯಿಂದ ಅದನ್ನು ವಿಚಾರಣೆ ನಡೆಸುತ್ತೇನೆ ಎಂದು ನ್ಯಾಯಾಧೀಶನೊಬ್ಬ ಹೇಳುವುದಕ್ಕಿಂತ ದೊಡ್ಡ ಮೂರ್ಖತನದ ವಿಚಾರ ಮತ್ತೊಂದಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಅಭಿಪ್ರಾಯಪಟ್ಟರು.

ಪ್ರಕರಣವೊಂದು ನಮ್ಮ ಮುಂದೆ ವಿಚಾರಣೆಗೆಂದು ಬಂದಾಗ, ನಾವು ಅದಕ್ಕೆ ನ್ಯಾಯ ಒದಗಿಸಬೇಕು. ಪ್ರಾಮಾಣಿಕರಾಗಿರಬೇಕು. ಯಾವುದೇ ಪೂರ್ವಗ್ರಹವನ್ನು ಹೊಂದಿರಬಾರದು. ವೈಯಕ್ತಿಕ ಆಸಕ್ತಿಗಳನ್ನು ತೋರಿಸಬಾರದು ಎಂದೆಲ್ಲ ನಾವು ನ್ಯಾಯಾಧೀಶರು ಹೇಳುತ್ತೇವೆ. ಆದರೆ ಅದು ಸಾಧ್ಯವಿಲ್ಲ. ಅಂತಹ ಮಾತೇ ಅಸಂಬದ್ಧ ಎಂದರು.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ದೇವಿ ಸಿಂಗ್ ತೆವಾಟಿಯಾ ಅವರ 'A Journey Less Travelled' ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಸಾಚಾರ್ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ತೆವಾಟಿಯಾ ಅವರನ್ನು ಒಬ್ಬ ನಂಬಿಕಸ್ತ ನ್ಯಾಯಾಧೀಶ ಮತ್ತು ವ್ಯಕ್ತಿ ಎಂದು ಸಾಚಾರ್ ಬಣ್ಣಿಸಿದರು.

ವ್ಯಕ್ತಿಯೊಬ್ಬ ವ್ಯತಿರಿಕ್ತ ಸಂದರ್ಭಗಳಲ್ಲೂ ನೈತಿಕತೆಯನ್ನು ಕಳೆದುಕೊಳ್ಳದೆ ಹೇಗೆ ಹೋರಾಟ ನಡೆಸಬೇಕು ಮತ್ತು ನ್ಯಾಯಾಧೀಶನೊಬ್ಬ ಹೇಗೆ ನಡೆದುಕೊಳ್ಳಬೇಕು ಎಂಬ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅದರ ಕುರಿತು ಅವರು ಚರ್ಚಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಿಜೆಐ ಜೆ.ಎಸ್. ವರ್ಮಾ, ಈ ಪುಸ್ತಕ ಸೂಕ್ತ ಸಮಯದಲ್ಲಿ ಹೊರ ಬಂದಿದೆ. ಈ ವ್ಯವಸ್ಥೆಗೆ ಈಗಾಗಲೇ ಬಂದಿರುವವರು ಮತ್ತು ಬರಲಿರುವವರಿಗೆ ಈ ಪುಸ್ತಕ ಅತ್ಯುತ್ತಮ ಮಾರ್ಗದರ್ಶಿ ಎಂದರು.

ತನ್ನ ಅನುಭವವೊಂದನ್ನು ಕೂಡ ವರ್ಮಾ ಅವರು ಇದೇ ವೇದಿಕೆಯಲ್ಲಿ ಬಿಚ್ಚಿಟ್ಟರು.

'ನಾನು ಪ್ರಕರಣವೊಂದರಲ್ಲಿ ನೀಡಿದ ತೀರ್ಪು ಸುಪ್ರೀಂ ಕೋರ್ಟಿನಲ್ಲಿ ವಿರುದ್ಧ ತೀರ್ಪನ್ನು ಪಡೆದಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ನೀನ್ಯಾಕೆ ಕ್ಷೋಭೆಗೊಂಡಿದ್ದೀಯಾ ಎಂದು ಆಗ ನನ್ನ ಸಹೋದರ ಪ್ರಶ್ನಿಸಿದರು. ಈ ನಿರ್ಧಾರ ತಪ್ಪು ಎಂದು ಒಬ್ಬ ವಕೀಲನಾಗಿ ನಾನು ವಾದ ಮಾಡಬಲ್ಲೆ, ಆದರೆ ನ್ಯಾಯಮೂರ್ತಿಯಾಗಿ ನಾನು ಅದನ್ನು ಸ್ವೀಕರಿಸಬೇಕು ಎಂದು ನಾನು ಆಗ ಆತನಿಗೆ ಉತ್ತರಿಸಿದೆ' ಎಂದರು.

Share this Story:

Follow Webdunia kannada