ಬೆಂಗಳೂರು: ಪ್ರಯಾಣಿಕ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ, ವಿಡಿಯೋ ವೈರಲ್ ಆದ ಬೆನ್ನಲ್ಲೇ ರ‍್ಯಾಪಿಡೋ ಬೈಕ್ ಸವಾರನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉಲ್ಲಾಳದ ಮುನಿಯಪ್ಪ ಲೇಔಟ್ ನಿವಾಸಿ ಲೋಕೇಶ್ (28) ಬಂಧಿತ ಆರೋಪಿ. ಆರೋಪಿಯನ್ನ ವಿಲ್ಸನ್ ಗಾರ್ಡನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನೂ ಪ್ರಯಾಣದೂದ್ದಕ್ಕೂ ಪ್ರಯಾಣಿಕ ಯುವತಿಗೆ ಸವಾರ ಕಾಲು, ತೊಡೆ ಸವರಿ ದೌರ್ಜನ್ಯ ಎಸಗಿದ್ದಾನೆ. ಯುವತಿ ಕಾಲಿನ ಮೇಲೆ ಚಾಲಕ ಕೈ ಇಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ನವೆಂಬರ್ 6ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಘಟನೆಯ ವೀಡಿಯೋ ಮಾಡಿ ಯುವತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ದುರ್ವರ್ತನೆ ತೋರಿದ್ದಲ್ಲದೇ, ಪ್ರಶ್ನಿಸಿದ್ರೂ ಮತ್ತೆ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ್ದ.
ಸ್ಥಳಕ್ಕೆ ತಲುಪಿದ ಬಳಿಕ ಯುವತಿಯ ಸ್ನೇಹಿತ ಚಾಲಕನನ್ನ ತರಾಟೆ ತೆಗೆದುಕೊಂಡಿದ್ಮೇಲೆ ಚಾಲಕ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.