Select Your Language

Notifications

webdunia
webdunia
webdunia
webdunia

ಜೆಡಿಎಸ್‌ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

JDS Leader Son Harassment Case

Sampriya

ಕಾರವಾರ , ಭಾನುವಾರ, 18 ಜನವರಿ 2026 (11:35 IST)
ಕಾರವಾರ: ಕದ್ರಾ ನಿವಾಸಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಡಿಯಲ್ಲಿ  ಕದ್ರಾ ಠಾಣೆ ಪಿಎಸ್‌ಐ ಅವರನ್ನು ಅಮಾನತು ಮಾಡಿದ್ದಾರೆ. 

ರೀನಾ ಹಾಗೂ ಕ್ರಿಸ್ತೋದ್ ಡಿಸೋಜಾ ಪುತ್ರಿ ರಿಶೇಲ್ ಡಿಸೋಜಾ‌ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ಪ್ರಾಥಮಿಕ ಹಂತದಲ್ಲೇ ನಿಷ್ಕಾಳಜಿ, ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾದ ವಿಚಾರದಲ್ಲಿ ಇದೀಗ ಕದ್ರಾ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಬಂಡಿವಡ್ಡರ್ ಅಮಾನತು ಮಾಡಲಾಗಿದೆ.

ರಿಶೇಲ್ ಕುಟುಂಬಸ್ಥರು ಹಾಗೂ ಸಮುದಾಯದ ಜನರು ಮೇಲಾಧಿಕಾರಿಗಳಿಗೆ ದೂರನ್ನು ನೀಡಿದ್ದರು. ಸಮುದಾಯ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆ ಕದ್ರಾ ಪಿಎಸ್‌ಐ ಸಸ್ಪೆಂಡ್ ಆಗಿದ್ದಾರೆ.

ಇನ್ನೂ ಜೆಡಿಎಸ್ ಮುಖಂಡೆ ಪುತ್ರನಾಗಿರುವ ಚಿರಾಗ್ ಕಾಟದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಮಾಡಲಾಗಿತ್ತು. 

ಪ್ರೀತಿಸುವಂತೆ ಕಾಟ ನೀಡಿದ್ದಲ್ಲದೇ ಯುವತಿಯನ್ನು ರೇಪ್ ಮಾಡಿದ್ದಾರೆಂದು ಆರೋಪಿಸಿ ಯುವತಿ ಕುಟುಂಬ ದೂರು ನೀಡಿತ್ತು. ಅತ್ಯಾಚಾರವಾಗಿರೋ ಸಂಶಯದ ಮೇರೆಗೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ಒತ್ತಾಯಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದಿನ ಹವಾಮಾನ ವರದಿ ಇಲ್ಲಿದೆ