ನೀನು ತೃಪ್ತಿ ಕೊಡುವುದಿಲ್ಲ, ನಿನ್ನ ತಮ್ಮನಿಂದ ತೃಪ್ತಿ ಪಡೆದ್ರೆ ತಪ್ಪಾ?

ಸೋಮವಾರ, 20 ಮೇ 2019 (14:50 IST)
ಅನೈತಿಕ ಸಂಬಂಧ ಹೊಂದ್ದಾಳೆ ಎನ್ನುವ ಆಕ್ರೋಶದಿಂದ ಪತಿಯೊಬ್ಬ ಪತ್ನಿಯ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ತನ್ನ ತಮ್ಮನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವುದು ತಿಳಿದ ಪತಿ ಆಕೆಯನ್ನು ನಿರ್ದಯವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾದ ಘಟನೆ ವರದಿಯಾಗಿದೆ.
 
ನೀನು ನನಗೆ ಲೈಂಗಿಕವಾಗಿ ತೃಪ್ತಿ ಕೊಡುವುದಿಲ್ಲ. ನಿನ್ನ ತಮ್ಮನೊಂದಿಗೆ ಲೈಂಗಿಕ ತೃಪ್ತಿ ಪಡೆದರೆ ತಪ್ಪಾ ಎಂದು ಪತ್ನಿ ಕೇಳಿದ್ದರಿಂದ ಕೋಪಗೊಂಡ ಪತಿ ಇಂತಹ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ನಗರಕ್ಕೆ ಹತ್ತಿರವಿರುವ ಗ್ರಾಮವೊಂದರ ನಿವಾಸಿಯಾಗಿರುವ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಪತಿಯ ತಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಇಂತಹ ಅನೈತಿಕ ಸಂಬಂಧ ಬಿಟ್ಟುಬಿಡು ಸರಿಯಲ್ಲ ಎಂದ ಪತಿಗೆ ನೀನೂ ನನ್ನ ಲೈಂಗಿಕ ದಾಹ ತೀರಿಸಲ್ಲ. ಆದ್ದರಿಂದ ನಿನ್ನ ತಮ್ಮನೊಂದಿಗೆ ಲೈಂಗಿಕ ಸುಖ ಪಡೆದ್ರೆ ತಪ್ಪಾ ಎಂದು ವಾದ ಮಾಡಿದ್ದಾಳೆ. ಇಬ್ಬರ ಅನೈತಿಕ ಸಂಬಂಧ ಹಾಗೇ ಮುಂದುವರಿದಿದೆ.
 
ನಿನ್ನೆ ರಾತ್ರಿ ದಂಪತಿಗಳ ಮಧ್ಯೆ ವಾಗ್ವಾದ ಪ್ರಕೋಪಕ್ಕೆ ತೆರಳಿದೆ. ಅನೈತಿಕ ಸಂಬಂಧ ಮುಂದುವರಿಸುತ್ತೇನೆ ಏನ್ ಮಾಡ್ತಿಯಾ ಎಂದು ಪತ್ನಿ ಪ್ರಶ್ನಿಸಿದ್ದಾಳೆ. ಇದರಿಂದ ತಾಳ್ಮೆ ಕಳೆದುಕೊಂಡ ಪತಿ, ಆಕೆಯ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದಾನೆ.
 
ಕೂಡಲೇ ಹತ್ತಿರದ ಬರ್ಗೂರ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಅನೈತಿಕ ಸಂಬಂಧ ಹೊಂದಿದ್ದರಿಂದ ಹತ್ಯೆ ಮಾಡಿದ್ದಾನೆ ಎಂದು ಪತಿ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೈವೋಲ್ಟೇಜ್ ಕದನ ಮಂಡ್ಯದಲ್ಲಿ ಭಾರೀ ಭದ್ರತೆ