Publish Date: Wed, 08 Jul 2026 (09:21 IST)
Updated Date: Wed, 08 Jul 2026 (09:24 IST)
ಬೆಂಗಳೂರು: ಕುಂಕುಮವನ್ನು ಕೇಸರಿಯಿಂದ ಮಾಡಲಾಗುತ್ತದೆ. ಶೇ 90 ರಷ್ಟು ಕುಂಕುಮ ಬರೋದು ಇಸ್ಲಾಮಿಕ್ ರಾಷ್ಟ್ರಗಳಿಂದ. ಆದರೆ ಅವರನ್ನು ಕಂಡರೆ ಆಗಲ್ಲ ಎಂದು ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ಗೃಹಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಏನಂದ್ರು ಗೊತ್ತಾ?
ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಕಿಡಿ ಕಾರುತ್ತಿರುವುದು ಇದೇ ಮೊದಲೇನಲ್ಲ. ಆರ್ ಎಸ್ಎಸ್ ಗೆ ಅಂಕುಶ ಹಾಕುವ ಬಗ್ಗೆ ಮಾತನಾಡುತ್ತಲೇ ಇದ್ದರು. ಈ ನಡುವೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಪ್ರಿಯಾಂಕ್ ಖರ್ಗೆ ಕುಂಕುಮದ ಬಗ್ಗೆ ಮಾತನಾಡಿದ್ದರು.
ಕುಂಕುಮ ಬರುವುದು ಇಸ್ಲಾಮಿಕ್ ರಾಷ್ಟ್ರಗಳಿಂದ. ಶೇ90 ರಷ್ಟು ಕುಂಕುಮ ಬರುವುದು ಇಸ್ಲಾಮಿಕ್ ರಾಷ್ಟ್ರಗಳಿಂದ. ಹೀಗೆ ಹೇಳಿದ್ರೆ ನಾಳೆ ತಿಲಕ ಹಾಕುವುದು ನಿಲ್ಲಿಸ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಅವರ ಈ ವಿಡಿಯೋ ತೀವ್ರ ಟ್ರೋಲ್ ಗೊಳಗಾಗಿದೆ. ಅಸಲಿಗೆ, ಕುಂಕುಮ ತಯಾರಾಗುವುದು ಕೇಸರಿಯಿಂದಲ್ಲ. ಅರಿಶಿನ, ಸೀಮೆ ಸುಣ್ಣ,ದಂತಹ ದೇಶೀಯ ವಸ್ತುಗಳನ್ನು ಬಳಸಿ ಕುಂಕುಮ ತಯಾರಿಸಲಾಗುತ್ತದೆ. ಆದರೆ ಗೃಹಸಚಿವರಿಗೆ ಈ ವಿಚಾರದ ಬಗ್ಗೆ ಗೊತ್ತೇ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಈ ವಿಡಿಯೋ ಶೇರ್ ಮಾಡಿಕೊಂಡು ಪ್ರಿಯಾಂಕ್ ಖರ್ಗೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜ್ಯೂನಿಯರ್ ಖರ್ಗೆಗೆ ಕುಂಕುಮ ಹೇಗೆ ತಯಾರಾಗುತ್ತದೆ ಎಂದೂ ಗೊತ್ತಿಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ