ಇದು ರಾಹುಲ್‌ ಗಾಂಧಿಯ ದೇಶದೊಳಗೆ ಆಂತರಿಕ ಕಲಹವನ್ನು ಹೆಚ್ಚಿಸುವ ತಂತ್ರ

Sampriya
ಶುಕ್ರವಾರ, 19 ಸೆಪ್ಟಂಬರ್ 2025 (14:29 IST)
Photo Credit X
ಬೀದರ್‌: ಮತಕಳ್ಳತನ ಪ್ರಕರಣದ ವಿಚಾರವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆ ಒಳಪಡಿಸಬೇಕೆಂದು ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. 

ನಗರದ ಗುಂಪಾ ಸಿದ್ದಾರೂಢ ಸ್ವಾಮಿ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜೀವನ ಆಧರಿಸಿದ ಪ್ರದರ್ಶನ ಹಾಗೂ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.  

ಕಳೆದ ವಿಧಾನಸಭೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಮತಗಳ್ಳತನದಿಂದಲೇ. ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಬೇಕೆಂದರು. 

ದೇಶದೊಳಗೆ ಆಂತರಿಕೆ ಕಲಹವನ್ನು ಹೆಚ್ಚಿಸುವ ಸಲುವಾಹಿ ಈ ಕೆಲಸವನ್ನು ಮಾಡಲಾಗುತ್ತಿದೆ. ಚುನಾವಣಾ ಆಯೋಗ, ವಾಣಿಜ್ಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ಸಂಸ್ಥೆಗಳ ಮೇಲಿಂದ ವಿಶ್ವಾಸ ಹೋಗುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷ ಕೆಲಸ ಮಾಡುತ್ತಿದೆ. ಜಾರ್ಜ್‌ ಸರೋಜ್‌ ಮಾಡುತ್ತಿರುವ ಕೆಲಸ ರಾಹುಲ್‌ ಗಾಂಧಿ ನಮ್ಮ ದೇಶದಲ್ಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಆಳಂದನಲ್ಲಿ ಗೆದ್ದವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ. ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಇಂದಿಗೂ ಮನೆ ಸಂಖ್ಯೆ ಸೊನ್ನೆ ಇದೆ. ಮತದಾರರ ಪಟ್ಟಿಯಲ್ಲೂ ಹಾಗೆಯೇ ಇದೆ. ಮನೆ ನಂಬರ್‌ ಸರಿಯಾಗಿ ಹಾಕುವುದಿಲ್ಲ. ರಾಹುಲ್‌ ಗಾಂಧಿಯವರು ಮಹದೇವಪುರ ಕ್ಷೇತ್ರದ ಬಗ್ಗೆ ಹೇಳಿದ್ದಾರೆ. ಮನೆ ಸಂಖ್ಯೆ ಎಲ್ಲಿ ಸರಿಯಾಗಿ ಫೀಡ್‌ ಆಗುವುದಿಲ್ಲವೋ ಅಲ್ಲಿ ಝೀರೋ ಹಾಕುತ್ತಾರೆ. ಇದನ್ನು ರಾಹುಲ್‌ ಗಾಂಧಿ ಅವರು ಅರ್ಥ ಮಾಡಿಕೊಂಡಿಲ್ಲ ಎಂದರೆ ಏನು ಹೇಳಬೇಕೆಂದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Andhrapradesh Temple Stampede: ಈ ಅಂಶಗಳು ಶ್ರೀಕಾಕುಳಂ ಕಾಲ್ತುಳಿತಕ್ಕೆ ಕಾರಣವಾಯಿತೇ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಗಾದಿ ಕುರಿತು ಸಿದ್ದು ಆಪ್ತ ಭೈರತಿ ಸುರೇಶ್ ಸ್ಫೋಟಕ ಹೇಳಿಕೆ

ಶ್ರೀಕಾಕುಳಂ ಕಾಲ್ತುಳಿತ ಶಾಕಿಂಗ್ ದುರ್ಘಟನೆ: ಕೆ ಕವಿತಾ

ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

ಗ್ಯಾರಂಟಿಗಳಿಂದ ಅನುದಾನ ಸಿಕ್ತಿಲ್ಲ, ಶಾಸಕರು ಕಾಲಿಗೆ ಬೀಳ್ತಿದ್ದಾರೆ: ಜಮೀರ್ ಅಹ್ಮದ್

ಮುಂದಿನ ಸುದ್ದಿ
Show comments