Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಮನಸ್ಸಿನ ಇಚ್ಛೇ ಆದಷ್ಟು ಭೇಗ ಫಲಿಸಲಿ: ಪುತ್ತಿಗೆ ಸ್ವಾಮೀಜಿ ಆಶೀರ್ವಾದ

ಡಿಸಿಎಂ ಡಿಕೆ ಶಿವಕುಮಾರ್

Sampriya

ಉಡುಪಿ , ಭಾನುವಾರ, 31 ಆಗಸ್ಟ್ 2025 (13:51 IST)
Photo Credit X
ಉಡುಪಿ: ಡಿಸಿಎಂ ಡಿಕೆ ಶಿವಕುಮಾರ್ ಒಬ್ಬರೇ ಓಪನ್ ಆಗಿ ಭಗವದ್ಗೀತೆ ಪಟಿಸುವ ಏಕೈಕ ರಾಜಕಾರಣಿ. ರಾಜ್ಯಕ್ಕೆ ಹಾಗೂ ದೇಶಕ್ಕೆ ಇನ್ನಷ್ಟು ಅವರ ಸೇವೆ ದೊರಕಲಿ. ಭಗವದ್ಗೀತೆ ಪುಸ್ತಕ ಪಡೆದಿರುವ ಡಿಕೆಶಿ ಅವರ ಮನಸ್ಸಿನ ಇಚ್ಚೆ ಫಲಿಸಲೆಂದು ಪುತ್ತಿಗೆ ಮಠದ  ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದಿಸಿದರು.

ಡಿಕೆಶಿ ಜೊತೆ ಪುತ್ತಿಗೆ ಮಠಕ್ಕೆ 35 ವರ್ಷದ ಸಂಬಂಧವಿದೆ. ಡಿಕೆ ಜೈಲ್ ಮಂತ್ರಿ ಆಗಿದ್ದರು, ಕೃಷ್ಣ ಹುಟ್ಟಿದ್ದು ಜೈಲಿನಲ್ಲೇ. ಅವರು ಶ್ರೀಕೃಷ್ಣನ ದೊಡ್ಡ ಭಕ್ತ, ಭಗವದ್ಗೀತೆಯನ್ನು ಬಹಳ ಅನುಸರಿಸುತ್ತಾರೆ ಎಂದು ಮಠದ ರಾಜಾಂಗಣದಲ್ಲಿ ನಡೆದ ತಮ್ಮ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮುಂದೆಯೇ ಮಾತನಾಡಿದರು. 

ಶ್ರೀ ಮಧ್ವಾಚಾರ್ಯರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಶ್ರೀ ಮಧ್ವಾಚಾರ್ಯರಿಗೆ ಬಂಡೆಕಲ್ಲು ಇಷ್ಟ. ಅವರು ಹನುಮನ ಅಪರಾವತಾರ. ಡಿಕೆಶಿ ಕನಕಪುರದ ಬಂಡೆ ಎಂದರು. 

ರಾಕ್‌ಸ್ಟಾರ್ ರಾಜಕಾರಣಿಯಾಗಿರುವ ಡಿಕೆಶಿ ಮಠದಲ್ಲಿ ಕೋಟಿ ಗೀತಾ ಲೇಖನ ಪುಸ್ತಕ ಪಡೆದಿದ್ದಾರೆ. ಅವರು ಪುಸ್ತಕ ಬರೆದು ಮುಗಿಸುವುದರೊಳಗೆ ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು ಪುತ್ತಿಗೆ ಸ್ವಾಮೀಜಿ ಆಶೀರ್ವದಿಸಿದರು.

ರಾಜಕಾರಣಿಗಳು ಆಸ್ತಿಕರಾಗುವುದು ಬಹಳ ಮುಖ್ಯ. ರಾಜಕಾರಣಿಗಳು ಆಸ್ತಿಕರಾದರೆ ಮಾತ್ರ ಜಗತ್ತು ಕ್ಷೇಮವಾಗಿರಲು ಸಾಧ್ಯ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

90 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ