Select Your Language

Notifications

webdunia
webdunia
webdunia
webdunia

ಅಂಬುಲೆನ್ಸ್ ದಾರಿ ಮಾಡಿಕೊಡದೆ ಪುಂಡಾಟ ಮೆರೆದ ಅಪ್ರಾಪ್ತರಿಗೆ ಕಾನೂನು ಸಂಕಷ್ಟ

Ambulance Viral Video
ಬೆಂಗಳೂರು: ಅಂಬುಲೆನ್ಸ್‌ಗೆ ದಾರಿ ಮಾಡಿ ಕೊಡದೆ ನಡುರಸ್ತೆಯಲ್ಲಿ ವೀಲಿಂಗ್ ಮಾಡಿ ಪುಂಡಾಟ ಮೆರೆದ ಪ್ರಕರಣ ಸಂಬಂಧ ಯಶವಂತಪುರ ಸಂಚಾರಿ ಪೊಲೀಶರು 6 ಅಪ್ರಾಪ್ತರವನ್ನು ವಶಕ್ಕೆ ಪಪಡೆದಿದ್ದಾರೆ. 

ಈ ಘಟನೆ ವರದಿಯಾಗಿದ್ದು ಜುಲೈ 4ರ ಮಧ್ಯರಾತ್ರಿ. ಕೆಲ ಯುವಕರು ರಸ್ತೆಯ ಮಧ್ಯೆ ವೀಲಿಂಗ್ ಮಾಡುತ್ತಾ ಅಂಬುಲೆನ್ಸ್‌ಗೂ ದಾರಿ ಬಿಡದೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಶವಂತಪುರ ಸಂಚಾರಿ ಪೊಲೀಸರು ತನಿಖೆ ನಡೆಸಿ, ವೀಲಿಂಗ್ ಮಾಡಿದ್ದ ಆರು ಅಪ್ರಾಪ್ತರನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಸಂಬಂಧ ಈಗಾಗಲೇ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮೋಸಾ ಪ್ರೇಮಿ ಲೋಕೋ ಪೈಲೆಟ್: ಬಿಸಿ ಬಿಸಿ ಸಮೋಸಾಗಿ ರೈಲನ್ನೇ ನಿಲ್ಲಿಸಿದ್ರು, ಇದೇನು ಲೋಕಲ್ ಬಸ್ಸಾ ಎಂದ ಜನ Video