ರಾಜಕೀಯ ದುರುದ್ದೇಶಗಳಿಂದ ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಗಂಭೀರವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇರುವಷ್ಟು ಬೆಂಬಲ ನನಗೂ ಇದೆ. ಅಹಿಂದ ಸಂಘಟನೆಗೆ ಚಾಲನೆ ನೀಡಿದ್ದೆ ನಾನು. ಮುಖ್ಯಮಂತ್ರಿಯವರ ಗೆಲುವಿಗಾಗಿ ನಾನು ನೇರವಾಗಿದ್ದೇನೆ. ನನ್ನನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಖಂಡಿಸುತ್ತೇನೆ. ಈ ಕುರಿತು ಪ್ರತಿಭಟನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ನನ್ನ ಕ್ಷೇತ್ರದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಯಾರಿಗೂ ಪ್ರತಿಭಟನೆ ನಡೆಸಿ ಎಂದು ಸೂಚನೆ ನೀಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ದುರುದ್ದೇಶದಿಂದ ನನ್ನನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ಸಂಪುಟದಿಂದ ಕೈಬಿಟ್ಟಿರುವುದು ಆಶ್ಚರ್ಯವಾಗಿದೆ. ಮುಖ್ಯಮಂತ್ರಿಯವರ ನಿರ್ಧಾರ ಯಕ್ಷಪ್ರಶ್ನೆಯಾಗಿ ಉಳಿದಿದೆ. ನಾನು ಮತ್ತು ಮುಖ್ಯಮಂತ್ರಿಯವರು ಯಾವತ್ತು ಪರಸ್ವರ ಆರೋಪಗಳನ್ನು ಮಾಡಿಲ್ಲ. ಮೈಸೂರಿನಲ್ಲೂ ಸಹ ಅವರ ಗೆಲುವಿಗಾಗಿ ಸಹಕಾರ ನೀಡಿದ್ದೆ. ನಾನು ರಾಜಕೀಯದಲ್ಲಿ ಹಿರಿಯ ಮತ್ತು ಅನುಭವ ಹೊಂದಿರುವ ರಾಜಕಾರಣಿ ನನ್ನನ್ನು ಸಂಪುಟದಿಂದ ಕೈಬಿಟಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರಣ ನೀಡಲಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.