ಮೈಸೂರು: ಜಿಲ್ಲೆಯಲ್ಲಿ ಇಂದು ಓರ್ವ ರೈತ ಹುಲಿ ದಾಳಿಗೆ ಸಾವನ್ನಪ್ಪುವ ಮೂಲಕ ಕಳೆದ 15ದಿನಗಳಲ್ಲಿ ಹುಲಿ ದಾಳಿಗೆ ಸಾವನ್ನಪ್ಪಿರುವವ ಸಂಖ್ಯೆ ಮೂರಕ್ಕೆ ಏರಿಕೆಯಾಘಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೇ ಹೆಗ್ಗೂಡಿಲು ಗ್ರಾಮದ ರೈತ ದಂಡನಾಯಕರ ಮೇಲೆ ಹುಲಿ ದಾಳಿ ನಡೆಸಿದೆ. ಅರ್ಧಕಿಲೋಮೀಟರ್ ಎಳೆದುಕೊಂಡ ಹೋದ ಹುಲಿ ರೈತನ ತೊಡೆ, ತಲೆ ಭಾಗವನ್ನು ತಿಂದು ಹಾಕಿದೆ.
ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಈ ಘಟನೆ ನಡೆದಿದೆ.
ಈಚೆಗೆ ಮೈಸೂರು ಜಿಲ್ಲೆಯಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಾರಕಕ್ಕೇರುತ್ತಿದೆ. ಒಂದೇ ತಿಂಗಳಲ್ಲಿ ಒಟ್ಟು ಮೂವರು ರೈತರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ 4ನೆ ಹುಲಿ ದಾಳಿ ಪ್ರಕರಣ ಇದ್ದಾಗಿದೆ. ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಯುತ್ತಿದ್ದು ತಾಲ್ಲೂಕಿನ ಜನರು ಕಂಗಾಲಾಗಿದ್ದಾರೆ.