ಬೆಳಗಾವಿ: ಜಿಲ್ಲೆಯ ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯನ್ನು ಗದ್ದೆಗೆ ಎಳೆದೊಯ್ದು ಗ್ಯಾಂಗ್ ರೇಪ್ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ನವೆಂಬರ್ 23ರಂದು ನಡೆದಿದ್ದು, ಕುಟುಂಬಸ್ಥರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ ಹಿನ್ನೆಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಿಟ್ಟುಬೀಸಲೆಂದು ತೆರಳಿದ್ದ ಬಾಲಕಿ ಮೇಲೆ ಆರೋಪಿಗಳಾದ ಮಣಿಕಂಠ ದಿನ್ನಿಮನಿ ಮತ್ತು ಈರಣ್ಣ ಸಂಕಮ್ಮ ಎಂಬವರು ಅತ್ಯಾಚಾರ ಎಸಗಿದ್ದಾರೆ.
ಮನೆಯಿಂದ 300 ಮೀಟರ್ ದೂರವಿರುವ ಹಿಟ್ಟಿನ ಗಿರಣಿಗೆ ಹಿಟ್ಟು ರುಬ್ಬಿಸಿಕೊಂಡು ಬರಲು ಸಂತ್ರಸ್ತ ಬಾಲಕಿ ತೆರಳಿದ್ದ ವೇಳೆ ಆಕೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ.
ಘಟನೆ ಸಂಬಂಧ ನಿನ್ನೆ (ಡಿ.1) ದೂರು ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.