ಹೈದರಾಬಾದ್: ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಗರ್ಲ್ ಫ್ರೆಂಡ್ ಸಕ್ಸಸ್ ಮೀಟ್ ಗೆ ಬಂದಿದ್ದ ವಿಜಯ್ ದೇವರಕೊಂಡ ಪಬ್ಲಿಕ್ ಆಗಿ ಮುತ್ತಿಕ್ಕಿದ ವಿಡಿಯೋ ಈಗ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಇಬ್ಬರ ಕೈಯಲ್ಲೂ ಉಂಗುರ ಮಿನುಗುತ್ತಿದೆ. ಆದರೆ ಇಬ್ಬರೂ ಇನ್ನೂ ಇದನ್ನು ಅಧಿಕೃತಗೊಳಿಸಿಲ್ಲ.
ಆದರೆ ನಿನ್ನೆ ಗರ್ಲ್ ಫ್ರೆಂಡ್ ಸಕ್ಸಸ್ ಈವೆಂಟ್ ನಲ್ಲಿ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ತಮ್ಮಿಬ್ಬರ ಮದುವೆಯನ್ನು ಘೋಷಿಸಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮದುವೆ ಬಗ್ಗೆ ಘೋಷಿಸಿಲ್ಲ.
ಆದರೆ ರಶ್ಮಿಕಾರನ್ನು ಕಂಡೊಡನೆ ಕೈ ಹಿಡಿದು ವಿಜಯ್ ಪಬ್ಲಿಕ್ ಆಗಿ ಕಿಸ್ ಮಾಡಿದ್ದಾರೆ. ರಶ್ಮಿಕಾ ಕೂಡಾ ನಾಚಿಕೊಂಡಿದ್ದಾರೆ. ಅಲ್ಲಿಯೇ ಇದ್ದ ಕ್ಯಾಮರಾಗಳು ಇದನ್ನು ಕ್ಲಿಕ್ಕಿಸಿವೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.