ರಾಧಿಕ ಪಂಡಿತ್ ಚಿತ್ರ ಹಚ್ಚೆ ಯಶ್ ಮೈಮೇಲೆ ರಾರಾಜಿಸುತ್ತಿದೆ..ಇಬ್ರು ಆಗ್ತಾರಾ ಮದುವೆ ?

ಗುರುವಾರ, 17 ಜುಲೈ 2014 (11:26 IST)
ಕನ್ನಡ ಚಿತ್ರರಂಗದಲ್ಲಿ ಹಾಟೆಸ್ಟ್ ಪೇರ್ ಆಗಿದ್ದಾರೆ ಯಶ್ ಮತ್ತು ರಾಧಿಕ ಪಂಡಿತ್. ಸೀರಿಯಲ್ ಒಂದರಲ್ಲಿ ಒಟ್ಟಾಗಿ ನಟಿಸಿದ್ದ ಈ ಜೋಡಿ ಆ ಬಳಿಕ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ತಳ ಊರಿದರು.
ಜನರಿಗೆ ಹೆಚ್ಚು ಹತ್ತಿರ ಆದರು. ಇತ್ತೀಚಿನ ಸುದ್ದಿ ಏನೆಂದರೆ ಇವರಿಬ್ಬರು ಲವ್ವಲ್ಲಿ  ಬಿದ್ದಿದ್ದಾರೆ. ಹೌದಂತೆ, ಇಲ್ಲವಂತೆ, ಏನೋ ಹಾಗೆ ಅಂತೆ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿ ಬರ್ತಾ ಇದಾರು ಸಹ ಈ ಜೋಡಿ ಪ್ರತಿಕ್ರಿಯೆ ತೋರಿರಲಿಲ್ಲ ಈ ಬಗ್ಗೆ.  

ಪ್ರಸ್ತುತ ಇವರಿಬ್ಬರು ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಅನ್ನಿವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕ ಪಂಡಿತ್ ಅವರ ಆಕೃತಿ ಟ್ಯಾಟೂ ವನ್ನು ಯಶ್ ಹಾಕಿಸಿ ಕೊಂಡಿದ್ದಾರೆ. ಈವರೆಗೂ ಅವರೆಷ್ಟೇ ತಾವಿಬ್ಬರು ಪ್ರೀತಿ ಮಾಡ್ತಾ ಇಲ್ಲ ಅಂದರು ಸಹ ಈ  ಟ್ಯಾಟೂ ಅವರ ಪ್ರೀತಿಯ ಬಗ್ಗೆ ಸಾರಿ ಹೇಳ್ತಾ ಇದೆ. ಇವರಿಬ್ಬರು ಡೇಟಿಂಗ್ ಮಾಡ್ತಾ ಇದ್ದಾರೆ ಅನ್ನೋದು ಸತ್ಯವಾಗಿದೆ. 
 
ಆದರೆ ಈ ಟ್ಯಾಟೂ  ತಾತ್ಕಾಲಿಕವಾದದ್ದು.  ಹೊಸ ಚಿತ್ರಕ್ಕೆ ಪೂರಕ ಆಗುವುದಕ್ಕೆ ಮಾತ್ರ ಹಾಕಿಸಿಕೊಂಡಿದ್ದಾರಂತೆ. ಏನೇ ಇರಲಿ  ಹಚ್ಚೆ ಈಗ ಅನೇಕ ಕಥೆಗಳನ್ನು ಸಾರುತ್ತಿವೆ.. ಅದು ಹೆಚ್ಚು ದಿನ ಹಾಗೆ ಉಳಿದರೆ ಈ ಜೋಡಿ ಒಂದಾಗೋದು ನಿಜ ಬದುಕಲ್ಲಿ ಖಂಡಿತ ಅನ್ನುವುದು ಸ್ಪಷ್ಟವಾಗುತ್ತದೆ.ಎಲ್ಲಕ್ಕೂ ಕಾಲ ಉತ್ತರ ಹೇಳುತ್ತದೆ. 

ವೆಬ್ದುನಿಯಾವನ್ನು ಓದಿ